ಎ ಚಿತ್ರದಲ್ಲಿ ಉಪ್ಪಿಯ ಹೆಸರು ಉಪೇಂದ್ರ. ಉಪೇಂದ್ರ ಚಿತ್ರದಲ್ಲಿ ನಾನು. ಉಪ್ಪಿ-2 ಚಿತ್ರದಲ್ಲಿ ಅನ್ನೋನು. ಪ್ರೀತ್ಸೆ ಚಿತ್ರದಲ್ಲಿ ಚಂದ್ರು. ಅಂದಹಾಗೆ ಐ ಲವ್ ಯೂ ಚಿತ್ರದ ನಿರ್ದೇಶಕ ಕೂಡಾ ಚಂದ್ರು. ಎ, ಉಪೇಂದ್ರ ಮತ್ತು ಪ್ರೀತ್ಸೆ ಚಿತ್ರಗಳ ಸ್ಫೂರ್ತಿಯಲ್ಲೇ ಬರುತ್ತಿರುವ ವಿಭಿನ್ನ ಲವ್ ಸ್ಟೋರಿ ಐ ಲವ್ ಯೂ. ಹೀಗಾಗಿಯೇ ಉಪ್ಪಿ ಪಾತ್ರದ ಹೆಸರೇನು ಅನ್ನೋ ಕುತೂಹಲವೂ ಇದೆ.
ಉಪೇಂದ್ರ ಪಾತ್ರಕ್ಕೆ ಚಂದ್ರು ಚಿತ್ರದಲ್ಲಿ ಸಂತೋಷ ಅನ್ನೋ ಹೆಸರು ಕೊಟ್ಟಿದ್ದಾರೆ. ಇದು ನಾನು ಮತ್ತು ಅನ್ನೋನು ಪಾತ್ರಗಳ ಒಟ್ಟು ಹೆಸರು ಅನ್ನೋದು ಚಂದ್ರು ವಿವರಣೆ. ನಾನು ಮತ್ತು ಅನ್ನೋನು ಕ್ಯಾರೆಕ್ಟರ್ಗಳು ಒಟ್ಟಾಗಿದ್ದಾಗ ಸಂತೋಷ ತಂತಾನೇ ಬರುತ್ತೆ. ಅದೇ ಕಾನ್ಸೆಪ್ಟ್ನಲ್ಲಿ ಉಪ್ಪಿ ಪಾತ್ರಕ್ಕೆ ಸಂತೋಷ ಅನ್ನೋ ಹೆಸರಿಡಲಾಗಿದೆ ಅಂತಾರೆ ಚಂದ್ರು. ಐ ಲವ್ ಯೂ ಚಿತ್ರದ ವಿಭಿನ್ನ ವಿಶೇಷಗಳ ಸರಣಿಯಲ್ಲಿ ಇನ್ನೂ ಹಲವಾರು ಅಚ್ಚರಿಗಳಿವೆ.