ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಹೊಸ ಹೆಸರು ತಂದುಕೊಟ್ಟ ಸಿನಿಮಾ ಸಂಗೊಳ್ಳಿ ರಾಯಣ್ಣ. ಅದಾದ ಮೇಲೆ ಪೌರಾಣಿಕ, ಐತಿಹಾಸಿಕ ಚಿತ್ರಗಳಿಗೆ ನಾನು ಯಾವಾಗ ಬೇಕಾದರೂ ಸಿದ್ಧ ಎಂದು ಸಾರಿದ್ದ ದರ್ಶನ್ಗೆ, ಮದಕರಿ ನಾಯಕನಾಗುವ ಆಸೆಯಾಗಿದೆಯಂತೆ. ಆ ಆಸೆಗೆ ನೀರೆರೆಯುತ್ತಿರುವುದು ರಾಕ್ಲೈನ್ ವೆಂಕಟೇಶ್. ಅಂದರೆ, ನಿರ್ಮಾಪಕರಾಗುತ್ತಿರುವುದು ಅವರೇ.
ದರ್ಶನ್ ಅವರನ್ನು ಮದಕರಿ ನಾಯಕನಾಗಿ ಚಿತ್ರಿಸಿಕೊಂಡು ಕಥೆ ಬರೆಯುತ್ತಿರುವುದು ಬಿ.ಎಲ್.ವೇಣು. ಚಿತ್ರದುರ್ಗದ ಕುರಿತು ಈಗಾಗಲೇ ಬಹಳಷ್ಟು ಸಾಹಿತ್ಯ ಸೃಷ್ಟಿಸಿರುವ ಬಿ.ಎಲ್.ವೇಣು, ಪಾತ್ರ, ಚಿತ್ರಕಥೆ ಹೊಸೆಯುತ್ತಿದ್ದಾರೆ. ನಿರ್ದೇಶಕರು ಯಾರು ಅನ್ನೋದು ಇನ್ನೂ ಪ್ರಶ್ನೆಯಾಗಿಯೇ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ದರ್ಶನ್ ಮದಕರಿ ನಾಯಕನಾಗಿ ಮಿಂಚಲಿದ್ದಾರೆ.