` ವಿಷ್ಣು ರಾಷ್ಟ್ರೀಯ ಉತ್ಸವ ಅದ್ಧೂರಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vishnu national film festival
Vishnu Rastriya Utsava

ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ವಿಷ್ಣುಸೇನಾ ಸಮಿತಿಯಿಂದ ನಡೆಯುತ್ತಿರುವ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಉತ್ಸವದಲ್ಲಿ ಕಿಚ್ಚ ಸುದೀಪ್, ವಿಷ್ಣುಗೀತೆಯನ್ನು ಹಾಡಿ ರಂಜಿಸಿದರು. ವೇದಿಕೆಯಲ್ಲಿ ವಿಷ್ಣು ಸ್ಮಾರಕ ವಿವಾದವೂ ಪ್ರಸ್ತಾಪವಾಯ್ತು.

ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಲಿ, ಬೆಂಗಳೂರಿನಲ್ಲಿರುವ ಅಂತ್ಯಕ್ರಿಯೆ ನಡೆದ ಸ್ಥಳ ಪುಣ್ಯಭೂಮಿಯಾಗಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿಗಳು, ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿದರು. ನಾವು ವಿಷ್ಣು ಅಭಿಮಾನಿಗಳು. ನಾವು ಮಾಡುವ ಕೆಲಸವನ್ನು ಶಿಸ್ತಿನಿಂದ ಮಾಡಿದರೆ ಸೂಕ್ತ ಫಲ ಸಿಗಲಿದೆ ಎಂದರು ಕಿಚ್ಚ ಸುದೀಪ್.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಕನ್ನಡಪ್ರಭದ ಪುರವಣಿ ಸಂಪಾದಕ ಜೋಗಿ ಅವರ `ಮಾತು ಮೌನ ಧ್ಯಾನ ವಿಷ್ಣುವರ್ಧನ' ಹಾಗೂ ಬಿಟಿವಿವಿ ಸಿನಿಮಾ ವಿಭಾಗದ ಮುಖ್ಯಸ್ಥ ಸದಾಶಿವ ಶೆಣೈ ಅವರ `ಮುಗಿಯದಿರಲಿ ಸಾಹಸಸಿಂಹ' ಮತ್ತು ಮನು ಅವರ `ಸಾಹಸಸಿಂಹ' ಕಾದಂಬರಿ ಕೃತಿಗಳು ಲೋಕಾರ್ಪಣೆಗೊಂಡವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ವಿಷ್ಣು ಸ್ಮಾರಕ ನಿರ್ಮಾಣ ಕುರಿತು ವಿಷ್ಣು ಸೇನಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery