` ಮತ್ತೆ ಬಂದ್ರು ಮುಮೈತ್ ಖಾನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
mummaith khan in a special song for dandupalya 4
Mummaith Khan

ಪೊಕಿರಿ ಚಿತ್ರದಿಂದ ವಲ್ರ್ಡ್ ಫೇಮಸ್ ಆಗಿದ್ದ ಚೆಲುವೆ ಮುಮೈತ್ ಖಾನ್, ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ದಂಡುಪಾಳ್ಯಂ-4 ಚಿತ್ರದಲ್ಲಿ ಮತ್ತೊಮ್ಮೆ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿ ಈ ಹಿಂದೆ ಹಲವು ಸಿನಿಮಾಗಳಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದ ಮುಮೈತ್ ಖಾನ್, ಮತ್ತೊಮ್ಮೆ ಸ್ಪೆಷಲ್ ಸಾಂಗ್ ಮೂಲಕವೇ ಕನ್ನಡದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಕೆ.ಟಿ.ನಾಯಕ್ ನಿರ್ದೇಶನದ ಸಿನಿಮಾದಲ್ಲಿ ಸುಮನ್ ರಂಗನಾಥ್ ನಾಯಕಿ. ದಂಡುಪಾಳ್ಯ ಸರಣಿಯ ಪಾರ್ಟ್ 2 ನಿರ್ಮಾಪಕ ವೆಂಕಟ್, ಈ ಚಿತ್ರಕ್ಕೂ ನಿರ್ಮಾಪಕ. ಏಕಕಾಲಕ್ಕೆ 5 ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರವಿದು.