` ಕುರುಕ್ಷೇತ್ರ ವಿಳಂಬದ ಕಾರಣ ಬಿಚ್ಚಿಟ್ಟ ಮುನಿರತ್ನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
muniratna talks about delya in kurukshetra
Muniratna, Darshan During Kurukshetra Shooting

ಕುರುಕ್ಷೇತ್ರ ಚಿತ್ರ ಸಂಕ್ರಾಂತಿಗೇ ರಿಲೀಸ್ ಎನ್ನುತ್ತಿತ್ತು ಚಿತ್ರತಂಡ. ನಂತರ ಯುಗಾದಿ ಬಂತು, ವರಮಹಾಲಕ್ಷ್ಮಿ ಬಂತು, ಗೌರಿ ಗಣೇಶ ಬಂದಾಯ್ತು. ದೀಪಾವಳಿ, ದಸರಾ ಹತ್ತಿರದಲ್ಲೇ ಇವೆ. ಆದರೆ, ಕುರುಕ್ಷೇತ್ರ ನಿಧಾನವಾಗುತ್ತಲೇ ಇದೆ. ಶೂಟಿಂಗ್, ಡಬ್ಬಿಂಗ್ ಮುಗಿಸಿರುವ ಸಿನಿಮಾ, ನಿಧಾನವಾಗುತ್ತಿರೋದಕ್ಕೆ ಏನಿರಬಹುದು ಕಾರಣ, ಈ ಕುರಿತಂತೆ ಎದ್ದಿರುವ ಊಹಾಪೋಹಗಳೆಲ್ಲ ನಿಜಾನಾ..? ಈ ಎಲ್ಲ ಪ್ರಶ್ನೆಗಳಿಗೆ, ಅನುಮಾನ, ಸಂದೇಹ, ಗಾಸಿಪ್ಪುಗಳಿಗೆ ಸ್ವತಃ ನಿರ್ಮಾಪಕ ಮುನಿರತ್ನ ಉತ್ತರ ಕೊಟ್ಟಿದ್ದಾರೆ.

- ಸಿನಿಮಾ ವಿಳಂಬಕ್ಕೆ ಕಾರಣ ಗ್ರಾಫಿಕ್ಸ್ ಕೆಲಸ. ಚೆನ್ನೈ ಹಾಗೂ ಹೈದರಾಬಾದ್‍ನಲ್ಲಿ ನಡೆದ ಸಿಜಿ ವರ್ಕ್ ನನಗೆ ಇಷ್ಟವಾಗಲಿಲ್ಲ. ಕುರುಕ್ಷೇತ್ರ ವಿಳಂಬಕ್ಕೆ ಅತಿ ದೊಡ್ಡ ಕಾರಣ ಇದೇ ಹೊರತು, ಮತ್ತೇನಲ್ಲ. ನಿರ್ಮಾಪಕನಾಗಿ ನನಗೆ ಸಮಾಧಾನವಾಗದೆ ಚಿತ್ರವನ್ನು ತೆರೆಗೆ ಹೇಗೆ ತರಲಿ. ರೀವರ್ಕ್ ನಡೆಯುತ್ತಲೇ ಇದೆ.

- ದರ್ಶನ್ ಜೊತೆ ಮನಸ್ತಾಪವಿಲ್ಲ. ನಿಖಿಲ್ ಪಾತ್ರ ಎಷ್ಟಿರಬೇಕು ಅನ್ನೋದನ್ನು ನಿರ್ಧರಿಸುವುದು ಕಥೆಯೇ ಹೊರತು, ಮತ್ತೇನಲ್ಲ. ಯಾರೋ ಒಬ್ಬರನ್ನು ಕಡೆಗಣಿಸಿ, ಮತ್ತೊಬ್ಬರಿಗೆ ಪ್ರಾಮುಖ್ಯತೆ ಕೊಡೋದಕ್ಕೆ ಸಾಧ್ಯವೇ ಇಲ್ಲ. 

- ನಿಖಿಲ್ ಡಬ್ಬಿಂಗ್‍ಗೆ ಬರುತ್ತಿಲ್ಲ ಎನ್ನುವ ವಾದವೇ ಅರ್ಥವಿಲ್ಲದ್ದು. ಅವರು ಡಬ್ಬಿಂಗ್‍ಗೆ ಸಿದ್ಧರಿದ್ದಾರೆ. 

- ನಿರ್ದೇಶಕ ನಾಗಣ್ಣ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರೇ ಸಿನಿಮಾದ ನಿರ್ದೇಶಕರು. ಅವರ ಕೆಲಸ ಅವರು ಮುಗಿಸಿಕೊಟ್ಟಿದ್ದಾರೆ. ಉಳಿದಿರೋದು ತಂತ್ರಜ್ಞರ ಕೆಲಸ. 

- ಕೋಟಿ ಕೋಟಿ ಸುರಿದು, ಸಿನಿಮಾ ನಿರ್ಮಿಸೋದು, ಅದನ್ನು ಡಬ್ಬಾದಲ್ಲೇ ಇಟ್ಟುಕೊಂಡು ಪೂಜೆ ಮಾಡೋಕಲ್ಲ. ಅದನ್ನು ಜನರಿಗೆ ತೋರಿಸಬೇಕು ಅನ್ನೋ ಆಸಕ್ತಿ ನನಗೂ ಇದೆ. ಆದರೆ, ಒಳ್ಳೆಯ ಕ್ವಾಲಿಟಿಯಲ್ಲೇ ತೋರಿಸಬೇಕು ಅನ್ನೋದು ನನ್ನ ಕನಸು. ಹೀಗಾಗಿ ವಿಳಂಬವಾಗಿದೆ.

ಹೀಗೆ ಮುನಿರತ್ನ, ಸಿನಿಮಾ ಕುರಿತ ಎಲ್ಲ ಅನುಮಾನ, ಗಾಸಿಪ್ಪುಗಳಿಗೆ ನೇರಾನೇರ ಉತ್ತರ ಕೊಟ್ಟಿದ್ದಾರೆ. ಒಂದಂತೂ ಸ್ಪಷ್ಟ. ದರ್ಶನ್‍ರ 51ನೇ ಸಿನಿಮಾ ಯಜಮಾನ, ಕುರುಕ್ಷೇತ್ರಕ್ಕಿಂತ ಮೊದಲೇ ಬಿಡುಗಡೆಯಾಗಬಹುದು. ಆದರೆ, ಕುರುಕ್ಷೇತ್ರವನ್ನು ಒಳ್ಳೆಯ ಕ್ವಾಲಿಟಿಯಲ್ಲೇ ಕೊಡುತ್ತೇನೆ ಎಂದು ಪಣ ತೊಟ್ಟಿದ್ದಾರೆ ಮುನಿರತ್ನ.