ಕೆಜಿಎಫ್ ನನಗೆ ತುಂಬಾ ಖುಷಿ ಕೊಟ್ಟಿತು. ಯಶ್ ಅವರ ಡೆಡಿಕೇಷನ್, ಪ್ರಶಾಂತ್ ಕೆಲಸ, ಇಡೀ ಟೀಂ ಕೆಲಸ ಮಾಡುತ್ತಿದ್ದ ಪರಿ.. ಎಲ್ಲವೂ ಇಷ್ಟವಾಯ್ತು. ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದರೂ, ಇಡೀ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ.
ಕೆಜಿಎಫ್ ಚಿತ್ರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಹೆಜ್ಜೆ ಹಾಕಿರುವ ಮಿಂಚಿನ ಬಳ್ಳಿ ತಮನ್ನಾ ಭಾಟಿಯಾ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಹಾಗೆ ಬಂದಿದ್ದಾಗ ಕೆಜಿಎಫ್ ಶೂಟಿಂಗ್ ಅನುಭವ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ನಟಿಸುವ ಆಸೆ ಇದೆ. ಪುನೀತ್ ಜೊತೆ ನಟಿಸುವ ಕನಸಿದೆ. ಒಳ್ಳೆಯ ಕಥೆ, ಕಾಲ ಕೂಡಿಬರಬೇಕು ಅಷ್ಟೆ ಎಂದಿದ್ದಾರೆ ತಮನ್ನಾ.
ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಹಾಡುಗಳಲ್ಲಷ್ಟೇ ಕಾಣಿಸಿಕೊಂಡಿದ್ದೇನೆ. ಸ್ಪೆಷಲ್ ಸಾಂಗ್‍ಗಷ್ಟೇ ಹೆಜ್ಜೆ ಹಾಕಿದರೆ ಪ್ರಾಬ್ಲಂ ಆಗುತ್ತೆ ಅನ್ನೋದು ಹಳೆಯ ಮಾತಾಯ್ತು. ಕತ್ರಿನಾ ಕೈಫ್, ಕರೀನಾ ಕಪೂರ್‍ರಂತಹವರು ಕೂಡಾ ಒಂದು ಹಾಡಿನಲ್ಲಷ್ಟೇ ಕಾಣಿಸಿಕೊಂಡ ಸಿನಿಮಾಗಳೂ ಇವೆ ಎಂದಿದ್ದಾರೆ ತಮನ್ನಾ.