ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ, 4 ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ಸಿನಿಮಾ. ಕನ್ನಡದಲ್ಲಿ ಕ್ವೀನ್ ಅರ್ಥಾತ್ ಬಟರ್‍ಫ್ಲೈ ಆಗಿರೋದು ಪಾರುಲ್ ಯಾದವ್. ನಿರ್ದೇಶಕ ರಮೇಶ್ ಅರವಿಂದ್, ಕನ್ನಡ ಹಾಗೂ ತಮಿಳು ವರ್ಷನ್‍ಗಳ ನಿರ್ದೇಶಕ. ಸಿನಿಮಾ ನವೆಂಬರ್‍ಗೆ ರಿಲೀಸ್ ಆಗಬಹುದು ಎಂಬ ಸುಳಿವು ಕೊಟ್ಟಿರುವುದು ಸ್ವತಃ ರಮೇಶ್ ಅರವಿಂದ್.
ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ನಡೀತಾ ಇದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿರುವ ಸಿನಿಮಾ ಇದು. ಒಂದೊಂದು ಭಾಷೆಯಲ್ಲೂ ಒಬ್ಬೊಬ್ಬರು ಹೀರೋಯಿನ್. ಹೀಗಾಗಿ ನವೆಂಬರ್‍ನಲ್ಲಿ ಏಕಕಾಲದಲ್ಲಿ ಸಿನಿಮಾ ತೆರೆಗೆ ತರೋಕೆ ಸಿದ್ಧತೆ ನಡೆದಿದೆ ಎಂದಿದ್ದಾರೆ ರಮೇಶ್ ಅರವಿಂದ್.
ಸೋಮವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ರಮೇಶ್ ಅರವಿಂದ್, ನಿರ್ದೇಶಕರಾಗಿ, ನಟರಾಗಿ, ಕಿರುತೆರೆಯಲ್ಲಿ ನಿರೂಪಕರಾಗಿ ಸಂಪೂರ್ಣ ಬ್ಯುಸಿಯಾಗಿಬಿಟ್ಟಿದ್ದಾರೆ. ಇದರ ನಡುವೆ ಬಟರ್‍ಫ್ಲೈ ಸಿನಿಮಾ ಕೆಲಸ ಚುರುಕಿನಿಂದ ನಡೆಯುತ್ತಿದೆ.