ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಹೊಸ ಸಿನಿಮಾ ಟೈಟಲ್ ಕೊನೆಗೂ ಫಿಕ್ಸ್ ಆಗಿದೆ. ಶೂಟಿಂಗ್ ಮುಗಿಸಿ, ಈಗಾಗಲೇ ಪೋಸ್ಟ್ ಪ್ರೊಡಕ್ಷನ್‍ನಲ್ಲಿರೋ ಸಿನಿಮಾಗೆ ಟೈಟಲ್ ಇಟ್ಟಿರಲಿಲ್ಲ. ಈಗ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಟೈಟಲ್ ಫೈನಲ್ ಮಾಡಿದ್ದಾರೆ ನಿದೇಶಕಿ ಪ್ರಿಯಾ.
ಯಶ್ ಜೊತೆ ಮದುವೆಯಾದ ನಂತರ ರಾಧಿಕಾ ಪಂಡಿತ್ ನಟಿಸಿರುವ ಸಿನಿಮಾ ಇದು. ರಂಗಿತರಂಗ, ರಾಜರಥ ನಂತರ, ಅಣ್ಣನನ್ನು ಬಿಟ್ಟು ಬೇರೆ ನಿರ್ದೇಶಕರ ಜೊತೆ ನಿರೂಪ್ ಭಂಡಾರಿ ನಟಿಸಿರುವ ಮೊದಲ ಸಿನಿಮಾ ಇದು. ಮಣಿರತ್ನಂ, ಸುಹಾಸಿನಿ ಜೊತೆ ಕೆಲಸ ಮಾಡಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ. ಹೀಗಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.
ಆದಿ ಅನ್ನೊದು ನಾಯಕನ ಹೆಸರು. ಲಕ್ಷ್ಮೀ ಅನ್ನೋದು ನಾಯಕಿ ಹೆಸರು. ಹೀಗಾಗಿ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಹೆಸರಿಟ್ಟಿದ್ದೇವೆ. ಶೀರ್ಷಿಕೆಗೆ ತಕ್ಕಂತೆ ಸಿನಿಮಾದಲ್ಲಿ ಮುದ್ದಾದ ವಿಭಿನ್ನವಾದ ಪ್ರೇಮ ಕಥೆ ಇದೆ ಎಂದು ಭರವಸೆ ಕೊಟ್ಟಿದ್ದಾರೆ ಪ್ರಿಯಾ.