ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾ, ರಿಲೀಸ್‍ಗೂ ಮೊದಲೇ ಹವಾ ಸೃಷ್ಟಿಸಿದೆ. ರಾಜ್ಯದ ಹಲವಾರು ಥಿಯೇಟರುಗಳಲ್ಲಿ ಈಗಾಗಲೇ ದಿ ವಿಲನ್ ನಮ್ಮ ಥಿಯೇಟರ್‍ಗೇ ಬರಲಿದೆ ಎಂಬ ಪೋಸ್ಟರ್‍ಗಳು ರಾರಾಜಿಸುತ್ತಿವೆ. ನಿರ್ಮಾಪಕ ಸಿ.ಆರ್.ಮನೋಹರ್ ಆಗಲೀ, ನಿರ್ದೇಶಕ ಪ್ರೇಮ್ ಆಗಲೀ, ಇದುವರೆಗೆ ಯಾವುದೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರಲೋಕಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ದಿ ವಿಲನ್ ಸಿನಿಮಾ, ಸೆಪ್ಟೆಂಬರ್ 20ಕ್ಕೆ ರಿಲೀಸ್ ಆಗಲಿದೆ.
ಅಲ್ಲಿಗೆ ಗೌರಿ ಗಣೇಶ ಹಬ್ಬವನ್ನು ಮುಗಿಸಿಕೊಂಡೇ ದಿ ವಿಲನ್ ಬರಲಿದ್ದಾನೆ. ಹಾಗೆಂದು ಸೆಪ್ಟೆಂಬರ್ 20ಕ್ಕೆ ರಿಲೀಸ್ ಆದರೂ, ದಿ ವಿಲನ್‍ಗೆ ಲಾಭಗಳೂ ಇವೆ. ಗೌರಿ ಗಣೇಶ ಹಬ್ಬದಂತೆಯೇ, 20ರ ನಂತರವೂ ಸಾಲು ಸಾಲು ರಜೆ ಸಿಗಲಿವೆ. ಸೆಪ್ಟೆಂಬರ್ 21ಕ್ಕೆ ಮೊಹರಂ ಹಬ್ಬ. ಸೆಪ್ಟೆಂಬರ್ 22, 4ನೇ ಶನಿವಾರ, ಬ್ಯಾಂಕ್ ರಜಾ. ಸೆಪ್ಟೆಂಬರ್ 21 ಭಾನುವಾರ. ಅಲ್ಲಿಗೆ ದಿ ವಿಲನ್‍ಗೆ ರಜೆಗಳ ಸೌಭಾಗ್ಯವೂ ಸಿಗಲಿದೆ. ಅಬ್ಬರಕ್ಕೆ ಅಷ್ಟು ಸಾಕಲ್ಲವೇ.
ಆ್ಯಮಿ ಜಾಕ್ಸನ್ ನಾಯಕಿಯಾಗಿರುವ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಅಕ್ಷರಶಃ ಮೋಡಿ ಮಾಡಿಬಿಟ್ಟಿವೆ. ಸಿನಿಮಾ ರಿಲೀಸ್‍ಗೆ ಅಭಿಮಾನಿಗಳೇ ಏನು, ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ.