ತಾರಕಾಸುರ. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಸಿನಿಮಾ. ರಥಾವರ ಚಿತ್ರದ ನಂತರ ಅವರು ನಿರ್ದೇಶಿಸುತ್ತಿರುವ ಸಿನಿಮಾ ಇದು. ಚಿತ್ರದಲ್ಲಿನ ಒಂದು ಹಾಡನ್ನು ಶಿವರಾಜ್‍ಕುಮಾರ್ ಅವರಿಂದ ಹಾಡಿಸಿರುವ ಚಿತ್ರತಂಡ, ಈಗ ಚಿತ್ರದ ಮೊದಲ ಹಾಡನ್ನು ಅಂಬರೀಷ್ ಅವರಿಂದ ಬಿಡುಗಡೆಗೊಳಿಸಿದೆ.
ಗಣ್ಯವ್ಯಕ್ತಿಯೊಬ್ಬರಿಂದ ಚಿತ್ರದ ಹಾಡು ಬಿಡುಗಡೆ ಮಾಡಿಸುವುದಾಗಿ ಹೇಳಿಕೊಂಡಿದ್ದ ಚಿತ್ರತಂಡ, ಕುತೂಹಲ ಹುಟ್ಟಿಸಿತ್ತು. ವೈಭವ್ ನಾಯಕನಾಗಿರುವ ಚಿತ್ರಕ್ಕೆ, ಅವರ ತಂದೆ ನರಸಿಂಹಲು ನಿರ್ಮಾಪಕರು. ಧರ್ಮವಿಶ್ ಸಂಗೀತ ನಿರ್ದೇಶನದ ಸಿನಿಮಾದ ಹಾಡು ಕಿವಿಗಿಂಪಾಗಿ ಕೇಳಿಸುತ್ತಿವೆ. ಕೇಳಿದವರು ಮೆಚ್ಚಿಕೊಂಡಿರೋದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.