ಪುನೀತ್ ರಾಜ್‍ಕುಮಾರ್ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ ಚಿತ್ರದ ಟೀಸರ್ ಹೊರಬಿದ್ದಿದೆ. ಅಮೆರಿಕದಲ್ಲಿ ಬಿಡುಗಡೆ ಮಾಡಿರುವ ಚಿತ್ರದ ಟೀಸರ್‍ನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ ಪುನೀತ್.
ಇತ್ತೀಚೆಗಷ್ಟೇ ಟ್ವಿಟರ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಪುನೀತ್ ರಾಜ್‍ಕುಮಾರ್ ಮಾಡಿರುವ ಮೊದಲ ಟ್ವೀಟ್ ಇದು. ಕವಲುದಾರಿ ಟೀಸರ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಕವಲುದಾರಿಯಲ್ಲಿ ಥ್ರಿಲ್ಲರ್ ಕಥೆಯಿದೆ. ಅಮೆರಿಕದಿಂದ ಬಂದ ಮೇಲೆ ಪುನೀತ್ ಸರ್ ಸಿನಿಮಾ ನೋಡುತ್ತಾರೆ. ಅವರೂ ಕೂಡಾ ಎಕ್ಸೈಟ್ ಆಗಿದ್ದಾರೆ. ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದಾರೆ ಹೇಮಂತ್ ರಾವ್. ಅನಂತ್‍ನಾಗ್, ರೋಷಿನಿ ಪ್ರಕಾಶ್ ಅಭಿನಯದ ಚಿತ್ರದಲ್ಲಿ ಅಲಮೇಲಮ್ಮ ಖ್ಯಾತಿಯ ರಿಷಿ ಹೀರೋ.
Related Articles :-