ರಕ್ಷಿತ್ ಶೆಟ್ಟಿ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದವರು. ಸಾಮಾಜಿಕ ಜಾಲತಾಣಗಳನ್ನು ಸಿನಿಮಾಗೆ ಬಳಸಿಕೊಳ್ಳೋದು ಹೇಗೆಂದು ತೋರಿಸಿಕೊಟ್ಟ ಮೊದಲಿಗರಲ್ಲಿ ರಕ್ಷಿತ್ ಕೂಡಾ ಒಬ್ಬರು. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಕ್ಷಿತ್, ಇದ್ದಕ್ಕಿದ್ದಂತೆ ಟ್ವಿಟರ್‍ನಲ್ಲಿ ಸೈಲೆಂಟ್. ಪ್ರತಿ ದಿನ ಟ್ವಿಟರ್‍ನಲ್ಲಿ ಸಂವಾದಕ್ಕೆ ಸಿಗುತ್ತಿದ್ದ ರಕ್ಷಿತ್ ಈಗ ದಿಢೀರನೆ ನಾಪತ್ತೆ. ಏಕಿರಬಹುದು ಎಂದು ಹುಡುಕಿದಾಗ ಕಂಡಿದ್ದು ಅವನೇ ಶ್ರೀಮನ್ನಾರಾಯಣ.
ಸಿನಿಮಾದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿಗೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದೇ ಸಮಸ್ಯೆಯಾಗಿತ್ತಂತೆ. ಹೀಗಾಗಿ ಶೂಟಿಂಗ್‍ಗೆ ತೊಂದರೆಯಾಗದೇ ಇರಲಿ ಎಂದು ಸೋಷಿಯಲ್ ಮೀಡಿಯಾದಿಂದಲೇ ದೂರ ಹೋಗಿದ್ದಾರೆ.
ಹೆಚ್ಚು ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಂಡಷ್ಟೂ, ಚಾರ್ಲಿ ಹಾಗೂ ಅವನೇ ಶ್ರೀಮನ್ನಾರಯಣ ಚಿತ್ರಗಳ ಶೂಟಿಂಗ್‍ಗೆ ಪ್ರಾಬ್ಲಂ ಆಗುತ್ತಿತ್ತು. ಹೀಗಾಗಿ ಅವರು ತಾತ್ಕಾಲಿಕವಾಗಿ ದೂರ ಹೋಗಿದ್ದಾರೆ. ಶೂಟಿಂಗ್ ಮುಗಿದ ಮೇಲೆ ಮತ್ತೆ ಬರ್ತಾರೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.