ಭರಾಟೆ. ಶ್ರೀಮುರಳಿ, ಶ್ರೀಲೀಲಾ ಅಭಿನಯದ ಚಿತ್ರಕ್ಕೆ ಬಹದ್ದೂರ್ ಚೇತನ್ ನಿರ್ದೇಶನವಿದೆ. ಚಿತ್ರದ ಚಿತ್ರೀಕರಣ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆಯುತ್ತಿದೆ. ಇಡೀ ಚಿತ್ರತಂಡ ಜೋಧ್‍ಪುರ್‍ನಲ್ಲಿಯೇ ಬೀಡುಬಿಟ್ಟಿದೆ.
ಇದರ ಮಧ್ಯೆ ಶ್ರೀಮುರಳಿ ಸೇರಿದಂತೆ ಇಡೀ ಚಿತ್ರತಂಡ ಓಡಾಟಕ್ಕೆ ನೆಚ್ಚಿಕೊಂಡಿರುವುದು ಆಟೋ ರಿಕ್ಷಾಗಳನ್ನ. ಜೋಧ್‍ಪುರದಲ್ಲಿ ಕಾರುಗಳ ಸಂಖ್ಯೆ ಕಡಿಮೆ. ಹೀಗಾಗಿ ಒಂದಿಷ್ಟು ಆಟೋಗಳನ್ನು ಬುಕ್ ಮಾಡಿಕೊಂಡು ಇಡೀ ಚಿತ್ರತಂಡ ಆಟೋಗಳಲ್ಲಿಯೇ ಓಡಾಡುತ್ತಿದೆ.
ಜೈಪುರದ ಬಿಸಿಲಿಗೆ ಹೊಂದಿಕೊಳ್ಳೋದು, ಬೆಂಗಳೂರಿನಿಂದ ಬಂದವರಿಗೆ ಸುಲಭದ ಮಾತಲ್ಲ. ಅಷ್ಟೊಂದು ಬಿಸಿಲು. ಆದರೂ ಚಿತ್ರೀಕರಣದ ಮಧ್ಯೆ ಬಿಸಿಲಿನತ್ತ ಗಮನ ಕೊಡೋಕೂ ಪುರುಸೊತ್ತಿಲ್ಲದಂತಾಗಿ ಹೋಗಿದೆ ಎಂದು ಹೇಳಿಕೊಂಡಿದ್ದಾರೆ ಶ್ರೀಮುರಳಿ.