ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಚಿತ್ರೀಕರಣಕ್ಕೆ ಈಗ ಸುನಿಲ್ ಶೆಟ್ಟಿ ಬಂದಿದ್ದಾರೆ.
ಸುನಿಲ್ ಶೆಟ್ಟಿ, ಪೈಲ್ವಾನ್ ಸಿನಿಮಾಗೆ 30 ದಿನಗಳ ಕಾಲ್‍ಷೀಟ್ ಕೊಟ್ಟಿದ್ದಾರೆ. ಬುಧವಾರದಿಂದ ಚಿತ್ರೀಕರಣಲ್ಲಿ ಪಾಲ್ಗೊಂಡಿದ್ದಾರೆ. ಹೈದರಾಬಾದ್ ಮತ್ತು ಬೆಂಗಳೂರು, ಎರಡೂ ಕಡೆ ಚಿತ್ರೀಕರಣ ನಡೆಯಲಿದೆ. ಸುದೀಪ್‍ಗೆ ಜೋಡಿಯಾಗಿ ನಟಿಸುತ್ತಿರುವುದು ಆಕಾಂಕ್ಷಾ ಸಿಂಗ್.
ಸುದೀಪ್ ಮತ್ತು ಸುನಿಲ್ ಶೆಟ್ಟಿ ನಡುವಣ ಗೆಳೆತನವೇ ಕಾಲ್‍ಷೀಟ್ ಸಿಗೋಕೆ ಕಾರಣ. ಸುದೀಪ್ ಬಾಲಿವುಡ್‍ಗೆ ಹೋಗುವ ಮೊದಲಿನಿಂದಲೂ, ಅವರಿಗೆ ಸುನಿಲ್ ಶೆಟ್ಟಿ ಜೊತೆ ಗೆಳೆತನ ಇತ್ತು. ಅವರು ಖುಷಿಯಾಗಿ ಒಪ್ಪಿಕೊಂಡು, ಚಿತ್ರೀಕರಣಕ್ಕೂ ಬಂದಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ದೇಶಕ ಕೃಷ್ಣ.