ಒಬ್ಬ ಅಮಾಯಕ ಯುವಕ, ಭಯ ಹುಟ್ಟಿಸುವ ಹೆಂಡತಿ, ಅಸಹಾಯಕ ಪ್ರೇಮಿ, ಅವರಿಬ್ಬರ ಮಧ್ಯೆ ಒಂದು ಹಾಟ್ ಕೇಕ್‍ನಂತಾ ಹುಡುಗಿ, ಒಬ್ಬ ಡಮ್ಮಿ ಡಾನ್, ಸೀಡ್‍ಲೆಸ್ ಸಿಂಗಂನಂತಾ ಪೊಲೀಸ್, ಒಬ್ಬ ಸಿಕ್ಕಾಪಟ್ಟೆ ಸೀರಿಯಸ್ ಬಫೂನ್, ಡಬಲ್ ಆಕ್ಟಿಂಗ್, ಡಬಲ್ ತಮಾಷಾ.. ಇದು ವಿಕ್ಟರಿ 2 ಟ್ರೈಲರ್.
ವಿಕ್ಟರಿ 2ನ ಟ್ರೈಲರ್ ರಿಲೀಸ್ ಆಗಿದೆ. ಅತ್ತ ಡಬಲ್ ಮೀನಿಂಗ್ ಅಲ್ಲದ, ಇತ್ತ ಸಿಂಗಲ್ ಮೀನಿಂಗೂ ಅಲ್ಲದ ಡೈಲಾಗುಗಳು ಕಚಗುಳಿ ಇಡುತ್ತಿವೆ. ಶರಣ್, ರವಿಶಂಕರ್, ಸಾಧು ಕೋಕಿಲ, ತಬಲಾ ನಾಣಿ, ಅಸ್ಮಿತಾ ಸೂದ್, ಅಪೂರ್ವ.. ಹೀಗೆ ತಾರಾಗಣದ ಪಟ್ಟಿ ದೊಡ್ಡದು.
ತರುಣ್ ಶಿವಪ್ಪ ನಿರ್ಮಾಣದ ಸಿನಿಮಾಗೆ ಹರಿ ಸಂತು ನಿರ್ದೇಶನವಿದೆ. ಗೆಟ್ ರೆಡಿ ಟು ನಗೋಣ.