ಭಾರತದಲ್ಲಿ ಗೂಗಲ್ ಕಾಲಿಡುವ ಮೊದಲೇ ವೆಬ್‍ಸೈಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ಚಿತ್ರಲೋಕ ಡಾಟ್ ಕಾಮ್‍ನ ಸಂಪಾದಕ ಕೆ.ಎಂ.ವೀರೇಶ್, ಈಗ ಇನ್ನೊಂದು ದಾಖಲೆ ಬರೆಯಲು ಹೊರಟಿದ್ದಾರೆ. ಅದೂ ಅಮೆರಿಕದಲಿ ಕನ್ನಡ ಸಿನಿಮಾ ಫೋಟೋ ಪ್ರದರ್ಶನ ನಡೆಸುವ ಮೂಲಕ. ಇದೂ ಒಂದು ದಾಖಲೆಯೇ. ಇದುವರೆಗೆ ಅಮೆರಿಕದಲ್ಲಿ ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸುವ ಒಂದೇ ಒಂದು ಫೋಟೋ ಎಕ್ಸಿಬಿಷನ್ ನಡೆದಿಲ್ಲ. ಆ ದಾಖಲೆ ಬರೆಯುತ್ತಿದ್ದಾರೆ ಚಿತ್ರಲೋಕ ವೀರೇಶ್.
ವೀರೇಶ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್ 8ರಂದು ಫೋಟೋ ಎಕ್ಸಿಬಿಷನ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ 85 ವರ್ಷಗಳ ಇತಿಹಾಸ ಕಟ್ಟಿಕೊಡುವ ವಿಶೇಷ ಪ್ರಯತ್ನಕ್ಕೆ ಕೈ ಹಾಕಿರುವ ವೀರೇಶ್, ಅಮೆರಿಕ ಕನ್ನಡ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ವೀರೇಶ್ ಅವರಿಗೆ ಫೋಟೋ ಎಕ್ಸಿಬಿಷನ್ ಸಾಧನೆ ಹೊಸದೇನಲ್ಲ. ಈಗಾಗಲೇ 2 ಬಾರಿ ಲಿಮ್ಕಾ ದಾಖಲೆ ಪುಸ್ತಕ ಸೇರಿರುವ ವೀರೇಶ್, ಬೆಂಗಳೂರು, ಮೈಸೂರ, ನವದೆಹಲಿಯಲ್ಲಿ ಫೋಟೋ ಎಕ್ಸಿಬಿಷನ್ ನಡೆಸಿದ್ದಾರೆ. ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಅಂಬಬರೀಷ್ ಅವರ 60ನೇ ಹುಟ್ಟುಹಬ್ಬದ ಸಡಗರದಲ್ಲಿ ವೀರೇಶ್ ಫೋಟೋ ಎಕ್ಸಿಬಿಷನ್ ನಡೆಸಿದ್ದರು. ವಿದೇಶದಲ್ಲಿ ಅದರಲ್ಲೂ ಅಮೆರಿಕದಲ್ಲಿ ವೀರೇಶ್ ಫೋಟೋ ಎಕ್ಸಿಬಿಷನ್ ನಡೆಸುತ್ತಿರುವುದು ಇದೇ ಮೊದಲು.