ಡೈನಮಿಕ್ ಸ್ಟಾರ್ ದೇವರಾಜ್ ಅವರ 2ನೇ ಪುತ್ರ ಪ್ರಣಾಮ್ ದೇವರಾಜ್, ಟಾಲಿವುಡ್‍ಗೆ ಹಾರಿದ್ದಾರೆ. ಇತ್ತೀಚೆಗಷ್ಟೇ ಕುಮಾರಿ 21ಎಫ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದ ಪ್ರಣಾಮ್, ಗಮನ ಸೆಳೆದಿದ್ದರು. ಈಗ 2ನೇ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ವೈರಂ, ಪ್ರಣಾಮ್ ದೇವರಾಜ್ ನಟಿಸುತ್ತಿರುವ ತೆಲುಗು ಚಿತ್ರದ ಹೆಸರು. ಸಾಯಿ ಶಿವಾನಿ ಎಂಬುವವರು ಚಿತ್ರದ ನಿರ್ದೇಶಕರು. ಈ ಸಿನಿಮಾ ಕನ್ನಡದಲ್ಲೂ ಬರಲಿದೆಯಂತೆ.
ದೇವರಾಜ್, ಕನ್ನಡದಲ್ಲಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿರುವ ನಟ. ಆಂಧ್ರಪ್ರದೇಶದಲ್ಲಿ ಅತ್ಯುತ್ತಮ ನಟನೆಗಾಗಿ ನಂದಿ ಅವಾರ್ಡ್ ಪಡೆದಿರುವ ಕಲಾವಿದ. ಹೀಗಾಗಿ ಪ್ರಣಾಮ್ ದೇವರಾಜ್ ಮೇಲೆ ತೆಲುಗು ಚಿತ್ರರಂಗದಲ್ಲೂ ಭಾರಿ ನಿರೀಕ್ಷೆ ಇದೆ.