2 ವರ್ಷಗಳ ಗಡ್ಡಕ್ಕೆ ಮುಕ್ತಿ ಹಾಡಿದ ರಾಕಿಂಗ್ ಸ್ಟಾರ್ ಯಶ್, ಆ ಮೂಲಕ ಕೆಜಿಎಫ್ ಚಿತ್ರದ ಶೂಟಿಂಗ್ ಮುಗೀತು ಅನ್ನೊದನ್ನೂ ಸಾರಿಬಿಟ್ಟಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್‍ನ ಅದ್ಧೂರಿ ಚಿತ್ರದ ಶೂಟಿಂಗ್ ಮುಗಿಸಿರುವ ಯಶ್, ಬೆನ್ನಲ್ಲೇ ಹೊಸ ಚಿತ್ರ ಶುರು ಮಾಡಿದ್ದಾರೆ. ನಿರೀಕ್ಷೆಯಂತೆಯೇ ಅನಿಲ್ ಕುಮಾರ್ ನಿರ್ದೇಶನದ ಮೈ ನೇಮ್ ಈಸ್ ಕಿರಾತಕ ಚಿತ್ರ ಶುರುವಾಗಿದೆ.
ರಾಜಾಜಿನಗರದ ಗಣಪತಿ ದೇವಸ್ಥಾನದಲ್ಲಿ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರಕ್ಕೆ ನಂದ ಲವ್ಸ್ ನಂದಿತಾ ಖ್ಯಾತಿಯ ಶ್ವೇತಾ ನಾಯಕಿ. ರ್ಯಾಂಬೋ-2 ಯಶಸ್ಸಿನ ಗುಂಗಿನಲ್ಲಿರುವ ಅನಿಲ್, ಕಿರಾತಕ ಚಿತ್ರದ ನಗರ ಜೀವನದ ವರ್ಷನ್‍ನಲ್ಲಿ ಚಿತ್ರದ ಕಥೆ ಮಾಡಿದ್ದಾರಂತೆ.