ಕನ್ನಡದ ಕಾಮಿಡಿ ಕಿಂಗ್ ಶರಣ್, ಈಗ ವಿಕ್ಟರಿ 2 ಚಿತ್ರದಲ್ಲಿ ಬ್ಯುಸಿ. ರ್ಯಾಂಬೋ2 ಸಕ್ಸಸ್ ಸಂಭ್ರಮದಲ್ಲಿರೋ ಶರಣ್ ಟೀಂ, ರಷ್ಯಾದಲ್ಲಿ ವಿಕ್ಟರಿ2 ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಿದೆ. ರಷ್ಯಾದಲ್ಲಿ ಕನ್ನಡದ ಜನಪದ ಕಲೆಗಳಾದ ಹುಲಿ ಕುಣಿತ, ಯಕ್ಷಗಾನಗಳ ಹಿನ್ನೆಲೆಯಲ್ಲಿ ಹಾಡು ಚಿತ್ರೀಕರಿಸಿದೆ. ರಷ್ಯಾದ ಹಿನ್ನೆಲೆಯಲ್ಲಿ ಕನ್ನಡದ ಜಾನಪದ ಕಲೆಗಳ ಕುಣಿತ ವಿಶೇಷವಾಗಿ ಕಣ್ತುಂಬಿಕೊಳ್ಳಲಿದೆ.
ಪ್ಲೀಸ್ ಟ್ರಸ್ಟು.. ನಾನು ಚೀಪ್ & ಬೆಸ್ಟು.. ಎಂಬ ಹಾಡಿಗೆ ಶರಣ್ ಹಾಗೂ ಅಸ್ಮಿತಾ ಸೂದ್ ಕುಣಿದು ಕುಪ್ಪಳಿಸಿದ್ದಾರೆ. ನಮ್ಮ ನೆಲದ ಜನಪದ ಕಲೆಗಳನ್ನು ವಿದೇಶದಲ್ಲಿ ಚಿತ್ರೀಕರಿಸುವುದೇ ಒಂದು ಸೊಗಸು. ಹೀಗಾಗಿ ಇಲ್ಲಿಂದಲೇ ಕಾಸ್ಟ್ಯೂಮ್ ಹಾಗೂ ನಾಲ್ವರು ನೃತ್ಯಗಾರರರನ್ನು ಕರೆದುಕೊಂಡು ಹೋಗಿದ್ದೆವು. ಎಂದು ವಿವರ ಹಂಚಿಕೊಂಡಿದ್ಧಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್. ರಷ್ಯಾದ ಬಾಕು ಎಂಬಲ್ಲಿ ಈ ಹಾಡು ಚಿತ್ರೀಕರಿಸಲಾಗಿದೆ. ತರುಣ್ ಶಿವಪ್ಪ ನಿರ್ಮಾಣದ ಚಿತ್ರಕ್ಕೆ, ಸಂತು ನಿರ್ದೇಶನವಿದೆ.