Rambo 2. ಶರಣ್ ಹೀರೋ ಆಗಿ ನಟಿಸಿದ್ದ ಸಿನಿಮಾ, ಅದ್ಧೂರಿಯಾಗಿ 100 ದಿನ ಪೂರೈಸಿದೆ. ಸ್ಯಾಂಡಲ್‍ವುಡ್‍ನಲ್ಲಿ ಈ ವರ್ಷ ಹಿಟ್ ಅಗಿರುವ ಕೆಲವೇ ಕೆಲವು ಚಿತ್ರಗಳಲ್ಲಿ Rambo 2 ಕೂಡಾ ಒಂದು. ಶರಣ್, ಅಶಿಕಾ ರಂಗನಾಥ್, ಚಿಕ್ಕಣ್ಣ, ರವಿಶಂಕರ್ ಪ್ರಮುಖ ಪಾತ್ರದಲ್ಲಿದ್ದ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶಕ. ಶರಣ್, ಅಟ್ಲಾಂಟಾ ನಾಗೇಂದ್ರ ಹಾಗೂ ತಂತ್ರಜ್ಞರೇ ನಿರ್ಮಾಪಕರಾಗಿದ್ದ ಸಿನಿಮಾ Rambo 2.
ಮೈಸೂರಿನ ಗಾಯತ್ರಿ, ಶಿವಮೊಗ್ಗದ ಹೆಚ್‍ಪಿಸಿ, ಮೈಸೂರಿನ ಡಿಆರ್‍ಸಿ ಮಲ್ಟಿಪ್ಲೆಕ್ಸ್, ಬೆಂಗಳೂರಿನ ಪಿವಿಆರ್, ಕಾರ್ನಿವಾಲ್, ಗೋಪಾಲನ್, ಸಿನಿಪೊಲಿಸ್, ಐನಾಕ್ಸ್‍ಗಳಲ್ಲಿ ಶತದಿನೋತ್ಸವ ಆಚರಿಸಿದೆ. ವಿದೇಶಗಳಲ್ಲಿಯೂ ಅದ್ಧೂರಿ ಪ್ರದರ್ಶನ ಕಂಡಿದ್ದ ಚಿತ್ರ, ಪ್ರೇಕ್ಷಕರ ಮನ ಗೆದ್ದಿರುವುದಷ್ಟೇ ಅಲ್ಲ, ಚಿತ್ರದ ತಂತ್ರಜ್ಞರ ಖಜಾನೆಯನ್ನೂ ತುಂಬಿಸಿದೆ. ಈ ಸಿನಿಮಾಗೆ ತಂತ್ರಜ್ಞರೇ ನಿರ್ಮಾಪಕರು.