ಚಾಲೆಂಜಿಂಗ್ ಸ್ಟಾರ್ ದರ್ಶನ್ 53ನೇ ಸಿನಿಮಾಗೆ ಓಂಕಾರ ಬಿದ್ದಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ಹೆಬ್ಬುಲಿ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಪಕರಾಗಿದ್ದಾರೆ. ಉಮಾಪತಿ ನಿರ್ಮಾಣದ ಒಂದಲ್ಲಾ.. ಎರಡಲ್ಲಾ.. ಚಿತ್ರ ರಿಲೀಸ್ ಸಂಭ್ರಮದ ನಡುವೆಯೇ, ಹೊಸ ಚಿತ್ರಕ್ಕೆ ಶ್ರೀಕಾರ ಹಾಕಿದ್ದು ವಿಶೇಷ.
ವರಮಹಾಲಕ್ಷ್ಮಿ ಹಬ್ಬದ ದಿನ ಶುಭ ದಿನವಾಗಿರುವ ಕಾರಣ, ಬೆಂಗಳೂರಿನಲ್ಲಿ ಮಲ್ಲೇಶ್ವರದಲ್ಲಿರೋ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಚಿತ್ರದಲ್ಲಿರೋದು ಕುಸ್ತಿಯ ಕಥೆ ಅಲ್ಲ ಅನ್ನೋದು ತರುಣ್ ಸುಧೀರ್ ಸ್ಪಷ್ಟನೆ. ಚೌಕ ನಂತರ ತರುಣ್ ನಿರ್ದೇಶಿಸುತ್ತಿರುವ ಸಿನಿಮಾ ಇದು. ಚಿತ್ರಕ್ಕೆ ರಾಬರ್ಟ್ ಅಥವಾ ಕಾಟೇರ ಎಂಬ ಟೈಟಲ್ ಇಡುವ ಸಾಧ್ಯತೆಗಳಿವೆ. ಈ ಎರಡನ್ನೂ ಹೊರತುಪಡಿಸಿ, 3ನೇ ಟೈಟಲ್ ಇಟ್ಟರೂ ಆಶ್ಚರ್ಯವಿಲ್ಲ.
ಕುರುಕ್ಷೇತ್ರ, ಯಜಮಾನ ಚಿತ್ರಗಳನ್ನು ಮುಗಿಸಿರುವ ದರ್ಶನ್, ಸದ್ಯಕ್ಕೆ ಒಡೆಯ ಚಿತ್ರದಲ್ಲಿ ಬ್ಯುಸಿ. ಒಡೆಯದ ಶೂಟಿಂಗ್ ಮುಗಿಯುವ ವೇಳೆಗೆ, ಈ ಸಿನಿಮಾದ ಶೂಟಿಂಗ್ ಶುರುವಾಗ