` ಕೆಸಿಸಿ : ಅಪ್ಪು, ಶಿವಣ್ಣ, ಯಶ್ V/S ಕಿಚ್ಚ, ಉಪ್ಪಿ, ಗಣೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kcc tournament will commence on sep
KCCTournament

ಕೆಸಿಸಿ ಟೂರ್ನಮೆಂಟ್ ಅಂದ್ರೆ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯ 2ನೇ ಸೀಸನ್ ಶುರುವಾಗಿದೆ. ಈ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಪಾಲ್ಗೊಳ್ಳುತ್ತಿರುವ ಟೂರ್ನಿಯಲ್ಲಿ ಎ ಮತ್ತು ಬಿ ತಂಡಗಳಿವೆ. ಎ ಗುಂಪಿನಲ್ಲಿ ಶಿವರಾಜ್‍ಕುಮಾರ್ ಅವರ ವಿಜಯನಗರ ಪೇಟ್ರಿಯಾಟ್ಸ್, ಪುನೀತ್ ರಾಜ್‍ಕುಮಾರ್ ಅವರ ಗಂಗಾ ವಾರಿಯರ್ಸ್ ಹಾUಗೂ ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ಎ ಗುಂಪಿನಲ್ಲಿವೆ.

ಬಿ ಗುಂಪಿನಲ್ಲಿ ಸುದೀಪ್ ಅವರ ಕದಂಬ ಲಯನ್ಸ್, ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ಹಾಗೂ ಗಣೇಶ್ ಅವರ ಒಡೆಯರ್ ಚಾರ್ಜರ್ಸ್ ತಂಡಗಳು ಸೆಣಸಲಿವೆ.

ಕಳೆದ ಸೀಸನ್‍ನಲ್ಲಿ ಶಿವಣ್ಣ ನೇತೃತ್ವದ ಟೀಂ ಚಾಂಪಿಯನ್ ಆಗಿತ್ತು. ಈ ಬಾರಿ ಉಪ್ಪಿ ಹಾಗೂ ಗಣೇಶ್ ಟೀಂಗಳು ಹೊಸ ಎಂಟ್ರಿ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡ ಫೈನಲ್ ಪ್ರವೇಶಿಸಲಿದೆ. ಸೆಪ್ಟೆಂಬರ್ 8ರಂದು ಟೂರ್ನಿ ಶುರುವಾಗಲಿದೆ.