ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಪ್ರಜ್ವಲ್ ದೇವರಾಜ್, ಪ್ರೇಮ್ ಮತ್ತು ಹರಿಪ್ರಿಯಾ ಕಾಂಬಿನೇಷನ್‍ನ ಸಿನಿಮಾ, ಬಿಡುಗಡೆಗೆ ಮೊದಲೇ ಕ್ರೇಜ್ ಹುಟ್ಟಿಸಿರುವ ಚಿತ್ರ. ಸತತ ಹಿಟ್ ಕೊಟ್ಟಿರುವ ದಿನಕರ್, 7 ವರ್ಷದ ನಂತರ ನಿರ್ದೇಶನ ಮಾಡಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಚೌಕ ನಂತರ, ಪ್ರೇಮ್ ಮತ್ತು ಪ್ರಜ್ವಲ್ ಒಟ್ಟಿಗೇ ನಟಿಸಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಪ್ರಜ್ವಲ್ ಜೊತೆ ನಟಿಸಿರುವ 3ನೇ ಸಿನಿಮಾ. ಇಷ್ಟೆಲ್ಲ ಇದ್ದರೂ, ಹರಿಪ್ರಿಯಾಗೆ ದಿನಕರ್ ಲಕ್ಕಿ ಅನ್ನಿಸೋಕೆ ಇನ್ನೂ ಒಂದು ಕಾರಣ ಇದೆ.
ಹರಿಪ್ರಿಯಾಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ದೊಡ್ಡ ಹೆಸರನ್ನೂ ಕೊಟ್ಟ ಚಿತ್ರ ನೀರ್‍ದೋಸೆ. ಆ ಎರಡೂ ಚಿತ್ರಗಳ ವಿತರಣೆಗೆ ದಿನಕರ್ ಸಾಥ್ ಕೊಟ್ಟಿದ್ದರಂತೆ. ಈಗ.. ಅವರದ್ದೇ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾ ಕೂಡಾ ಹಿಟ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಹರಿಪ್ರಿಯಾ.
ಚಿತ್ರದಲ್ಲಿನ ನನ್ನ ಪಾತ್ರ ರಿಯಲ್ ಲೈಫ್‍ಗೆ ಹತ್ತಿರವಾಗಿದೆ. ಹೀಗಾಗಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. ದಿನಕರ್ ಅವರ ಪತ್ನಿ ಮಾನಸ ಅವರು ಬರೆದಿರುವ ಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ದಿನಕರ್.