ದಿ ವಿಲನ್ ಚಿತ್ರದ ಆಡಿಯೋ ಅಧಿಕೃತವಾಗಿ ರಿಲೀಸ್ ಆಗಿದೆ. ಹಾಡುಗಳು ಭರ್ಜರಿಯಾಗಿ ಸದ್ದು ಮಾಡುತ್ತಿವೆ. ಹೀಗಿರುವಾಗಲೇ ನಿರ್ಮಾಪಕ ಸಿ.ಆರ್.ಮನೋಹರ್, ಕಲಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕಲಿ, ಶಿವರಾಜ್ ಕುಮಾರ್, ಸುದೀಪ್, ಪ್ರೇಮ್ ಕಾಂಬಿನೇಷನ್‍ನಲ್ಲಿ ಸಿ.ಆರ್.ಮನೋಹರ್ ಅವರೇ ಶುರು ಮಾಡಿದ್ದ ಸಿನಿಮಾ. ಸಿನಿಮಾದ ಟೀಸರ್‍ನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಲೀಸ್ ಮಾಡಿದ್ದರು. ಅದ್ಧೂರಿ ಮುಹೂರ್ತವೂ ನೆರವೇರಿತ್ತು. ಅದಾದ ನಂತರ ಆ ಸಿನಿಮಾ ಅರ್ಧಕ್ಕೆ ನಿಂತು, ಕೊನೆಗೆ ದಿ ವಿಲನ್ ಶುರುವಾಯ್ತು. ಈಗ ರಿಲೀಸ್‍ಗೆ ರೆಡಿಯಾಗಿದೆ.
ಕಲಿ ನನ್ನ ಕನಸಿನ ಪ್ರಾಜೆಕ್ಟ್. ಅದನ್ನು ಬಾಹುಬಲಿ ರೇಂಜ್‍ನಲ್ಲಿಯೇ ನಿರ್ಮಿಸಿ, ತೆರೆಗೆ ತರುವ ಚಿಂತನೆಯಿದೆ. ದಿ ವಿಲನ್ ತೆರೆ ಕಂಡ ನಂತರ ಕಲಿಗೆ ಚಾಲನೆ ಸಿಗಲಿದೆ ಎಂದಿದ್ದಾರೆ ಮನೋಹರ್.