ಸಿನಿಮಾ ಮಾಡುವುದು ಒಂದು ಸಾಹಸವಾದರೆ, ಸಿನಿಮಾ ಮಾಡುವುದಕ್ಕಿಂತ ದೊಡ್ಡ ಸಾಹಸ ಸಿನಿಮಾ ಬಿಡುಗಡೆ ಮಾಡುವುದು. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವುದು ಒಂದು ಕಲೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಸಿನಿಮಾ ಪ್ರಚಾರ ಮಾಡ್ತಾರೆ. ಆದರೆ, ಒಂದಲ್ಲ.. ಎರಡಲ್ಲಾ ಚಿತ್ರ ತಂಡವೇ ಡಿಫರೆಂಟು. ಅವರು ಕ್ವಿಜ್ ಮೂಲಕವೂ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಪ್ರಶ್ನೆಗಳ ಸ್ಯಾಂಪಲ್ ನೋಡಿ.
1. ಶಂಕರ್‍ನಾಗ್ ಅವರ ಪ್ರಸಿದ್ಧ ಮಾಲ್ಗುಡಿ ಡೇಸ್ ಸರಣಿಯ ಪ್ರಸಾರವಾದ ಒಟ್ಟು ಎಪಿಸೋಡುಗಳ ಸಂಖ್ಯೆ ಎಷ್ಟು..? ಉತ್ತರ ಹೀಗಿರುತ್ತೆ. ಒಂದಲ್ಲ..ಎರಡಲ್ಲ.. 54.
2. ನಮ್ಮ ದೇಹದೊಳಗಿನ ರಕ್ತ ಚಲಿಸುವ ಒಟ್ಟು ದೂರ ಎಷ್ಟು..?
ಉತ್ತರ ಹೀಗೆ.. ಒಂದಲ್ಲ..ಎರಡಲ್ಲಾ.. 19,312 ಕಿ.ಮೀ.
ಪ್ರಶ್ನೆಗಳು ಚಿಕ್ಕವು. ಆದರೆ, ಉತ್ತರ ಮಾತ್ರ ಸ್ವಾರಸ್ಯಕರವಾಗಿರುತ್ತೆ. ಒಂದಲ್ಲ..ಎರಡಲ್ಲಾ. ಸತ್ಯ ಸಂಗತಿ ಅಂತಾ ಈ ಪ್ರಶ್ನೆಗಳ ಮೂಲಕ ಚಿತ್ರದ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಉತ್ತರ ಹೇಳುವಾಗಲೇ ಒಂದಲ್ಲಾ.. ಎರಡಲ್ಲಾ.. ಎಂಬ ಸಿನಿಮಾದ ಹೆಸರು ಬರುವಂತೆ ನೋಡಿಕೊಳ್ಳಲಾಗುತ್ತಿದೆ.
ಸತ್ಯಪ್ರಕಾಶ್ ನಿರ್ದೇಶನದ, ಉಮಾಪತಿ ನಿರ್ಮಾಣದ ಸಿನಿಮಾ ಇದು. ಸೃಜನಶೀಲ ಮನಸ್ಸುಗಳು ಹೇಗೆಲ್ಲ ಯೋಚಿಸುತ್ತವೆ ಎಂಬುದಕ್ಕೆ ಇದು ಉದಾಹರಣೆ.