ಅಗ್ನಿ ಎಂದ ಕೂಡಲೇ ಸಾಯಿಕುಮಾರ್ ನೆನಪಾಗ್ತಾರೆ. ಆರ್ಮುಗಂ ಎಂದ ಕೂಡಲೇ ರವಿಶಂಕರ್ ನೆನಪಾಗ್ತಾರೆ. ತೆಲುಗಿನವರಾದ ಇಬ್ಬರೂ ಸೋದರರಿಗೆ ಸ್ಟಾರ್‍ಗಿರಿ ತಂದುಕೊಟ್ಟಿದ್ದು ಕನ್ನಡ ಚಿತ್ರರಂಗ. ಕನ್ನಡದವರೇ ಆಗಿ ಹೋಗಿರುವ ಈ ಇಬ್ಬರೂ, ಈಗ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಅದೂ ನಿಷ್ಕರ್ಷ ಚಿತ್ರದಲ್ಲಿ.
ಸಿ.ಎಂ.ವಿಜಯ್ ನಿರ್ದೇಶನದ ಚಿತ್ರದಲ್ಲಿ ಈಗಾಗಲೇ ಸಾಯಿಕುಮಾರ್, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಪಾತ್ರಕ್ಕೆ ರವಿಶಂಕರ್ ಅವರನ್ನು ಒಪ್ಪಿಸುವ ಚಿಂತನೆ ಚಿತ್ರತಂಡಕ್ಕಿದೆ. ಅನಿಕೇತನ್, ದಿವ್ಯಾ ಉರುಡಗ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರಕ್ಕೆ ಈಗಾಗಲೇ ಮುಹೂರ್ತ ನೆರವೇರಿದೆ. ವಿಷ್ಣುವರ್ಧನ್, ಅನಂತ್‍ನಾಗ್, ಬಿ.ಸಿ.ಪಾಟೀಲ್ ಅಭಿನಯದ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರದ ಟೈಟಲ್‍ನಲ್ಲೇ ಚಿತ್ರಕ್ಕೆ ಇಡಲಾಗಿದೆ. ಚಿತ್ರತಂಡದ ಯೋಜನೆಯಂತೆ ಸಾಯಿಕುಮಾರ್ ಮತ್ತು ರವಿಶಂಕರ್ ಒಟ್ಟಿಗೇ ನಟಿಸಿದರೆ, ಅದು ದಾಖಲೆಯಾಗಲಿದೆ.