ತೋತಾಪುರಿ.. ಇದು ಹೊಸ ಸಿನಿಮಾದ ಹೆಸರು. ತೊಟ್ ಕೀಳ್ಬೇಕಷ್ಟೆ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಸಿದ್ಲಿಂಗು, ನೀರ್‍ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶಕ. ನವರಸ ನಾಯಕ ಜಗ್ಗೇಶ್ ನಾಯಕ. ಶಿವಲಿಂಗ ಸುರೇಶ್ ನಿರ್ಮಾಣದ ಚಿತ್ರದಲ್ಲಿ ಜಗ್ಗೇಶ್ ಅಡುಗೆ ಭಟ್ಟನಾಗಿದ್ದಾರೆ.
ನೀರ್‍ದೋಸೆ ನಂತರ ಜಗ್ಗೇಶ್-ವಿಜಯ್ ಪ್ರಸಾದ್ ಜೋಡಿ ಮುಂದಿನ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲ ನನಗೂ ಇತ್ತು. ಚಿತ್ರದ ಟೈಟಲ್ ಮತ್ತು ಕಥೆ ಕೇಳಿದ ಮೇಲೆ ಖುಷಿಯಾಗಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ ಅಂತಾರೆ ಸುರೇಶ್. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತವಿದೆ.