ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾಗೆ ಅದ್ಭುತ ಓಪನಿಂಗ್ ಸಿಕ್ಕಿದೆ. ಇದೇ ಶುಕ್ರವಾರ ರಿಲೀಸ್ ಆಗಿರುವ ಸಿನಿಮಾ, ಮೂರೇ ದಿನಕ್ಕೆ 4 ಕೋಟಿ ಗಳಿಕೆ ಮಾಡಿದೆಯಂತೆ. ಹಳೇ ಮೈಸೂರು ಭಾಗದಲ್ಲಂತೂ ಚಿತ್ರ ಮಂದಿರಗಳು ತುಂಬಿ ತುಳುಕಿವೆ.
ರಾಜ್ಯಾದ್ಯಂತ 280 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾಗೆ ಎಲ್ಲೆಡೆ ಹೌಸ್‍ಫುಲ್ ಪ್ರದರ್ಶನದ ಭಾಗ್ಯ ಸಿಕ್ಕಿದೆ. ಮಂಡ್ಯ ಸೊಗಡಿನ ಚಿತ್ರಕ್ಕೆ ಉತ್ತರ ಕರ್ನಾಟಕ ಭಾಗದಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಮಕ್ ಸಿನಿಮಾದಲ್ಲೂ ಗೆಲುವಿನ ಮ್ಯಾಜಿಕ್ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್, ಅಯೋಗ್ಯ ಚಿತ್ರದಲ್ಲೂ ಯೋಗ ಕಂಡಿದ್ದಾರೆ.