` ಅಪ್ಪನಂತೆ ಮಗ.. ಪುನೀತ್‍ಗೆ ಶೋಭಾ ಕರಂದ್ಲಾಜೆ ಹೇಳಿದ್ದೇಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shobha karandanjle meets puneeth rajkumar
Shobha Karandanjle, Puneeth Rajkumar

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 4 ವರ್ಷ ಪೂರೈಸಿ, 5ನೇ ವರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನ ಆರಂಭಿಸಿದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಸೆಲಬ್ರಿಟಿಗಳು ಹಾಗೂ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈ ಕುರಿತು ಒಂದು ವಿಶೇಷ ಪುಸ್ತಕವನ್ನೇ ಮಾಡಿದೆ ಬಿಜೆಪಿ ಸರ್ಕಾರ. ಈ ಅಭಿಯಾನದ ಅಂಗವಾಗಿ ಸಂಸದೆ ಶೋಭಾ ಕರಂದ್ಲಾಜೆ, ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ರನ್ನು ಭೇಟಿ ಮಾಡಿದ್ದಾರೆ. ಸರ್ಕಾರದ ಸಾಧನೆಯ ಪುಸ್ತಕವನ್ನೂ ನೀಡಿದ್ದಾರೆ. 

ಅಪರೂಪದ ಸರಳ ವ್ಯಕ್ತಿತ್ವ ಹೊಂದಿರುವ ಸ್ಯಾಂಡಲ್‍ವುಡ್ ಕಿಂಗ್ ಪುನೀತ್ ರಾಜ್‍ಕುಮಾರ್‍ರನ್ನು ಭೇಟಿ ಮಾಡಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆ, ಕೆಲಸಗಳ ಬಗ್ಗೆ ಪುಸ್ತಕ ನೀಡಿ ವಿವರಣೆ ನೀಡಿದೆ. ಅಪ್ಪನಂತೆ ಮಗ ಎಂದಿದ್ದಾರೆ ಶೋಭಾ.

ಶೋಭಾ ಅವರಿಗೆ ಪುನೀತ್ ಅವರಲ್ಲಿ ಇಷ್ಟವಾಗಿರೋದು ಅವರ ಸರಳತೆ. ವಿನಯಪೂರ್ವ ವರ್ತನೆ. ಇತ್ತೀಚೆಗೆ ಶಾಸಕ ಶ್ರೀರಾಮುಲು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಬಿಜೆಪಿ ಸಾಧನೆಯ ಪುಸ್ತಕ ಕೊಟ್ಟಿದ್ದರು. ಈಗ ಶೋಭಾ ಕರಂದ್ಲಾಜೆ, ಪುನೀತ್ ಅವರನ್ನು ಭೇಟಿ ಮಾಡಿದ್ದಾರೆ.