` ಒಂದಲ್ಲಾ..ಎರಡಲ್ಲಾ.. ಕಥೆಯಲ್ಲೇನಿದೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ondalla eradalla is a unique story
Ondalla Eradalla Movie Image

ಒಂದಲ್ಲಾ..ಎರಡಲ್ಲಾ.. ಚಿತ್ರದ ಕಥೆ ಏನಿರಬಹುದು..? ಖಂಡಿತಾ ಅದು ಕೋಮು ಸಾಮರಸ್ಯದ ಕಥೆಯೇ ಆಗಿರಲಿದೆ. ಚಿತ್ರದಲ್ಲಿ ಪುಟ್ಟ ಬಾಲಕನ ಕಥೆ ಇದೆ. ಕೋಮುಗಲಭೆಯ ವಿಭಿನ್ನ ಮುಖಗಳ ಅನಾವರಣವಾಗಲಿದೆ. ರಾಜಕೀಯದ ಕ್ರೌರ್ಯದ ಕಥೆ ಇರಲಿದೆ. ಮಾನವೀಯತೆಯೇ ವಿಜೃಂಭಿಸಲಿದೆ. ಹೀಗೆ.. ಒಂದಲ್ಲಾ..ಎರಡಲ್ಲಾ.. ಟ್ರೇಲರ್ ನೋಡಿದವರಿಗೆ ಅನ್ನಿಸುವ ಭಾವನೆಗಳು ಹಲವಾರು. ನಿರ್ದೇಶಕ ರಾಮಾ ರಾಮಾ ರೇ ಸತ್ಯಪ್ರಕಾಶ್, ಮೊದಲು ಗೆದ್ದಿದ್ದು ಟ್ರೇಲರ್‍ನಲ್ಲಿ. 

ಗಲಭೆಯ ದೃಶ್ಯ, ಓಡಿ ಹೋಗುವ ಸಮೀರ, ನಾಪತ್ತೆಯಾದ ಪುಟಾಣಿ ಭಾನು, ಪುಟಾಣಿ ಹುಡುಗಿಯ ಹಿನ್ನೆಲೆ ಧ್ವನಿ, ಕಾಡು ನುಂಗಿದ ಕಳ್ಳ ಊರಲಿ ಬಂದು ನಿಂತನು ಸಮೀರ ಎನ್ನುವ ಡೈಲಾಗು.. ಹೀಗೆ ಟ್ರೇಲರ್‍ನಲ್ಲಿ ಕುತೂಹಲಗಳಿವೆ. ಪ್ರಶ್ನೆಗಳಿವೆ. ಭಾವನೆಗಳನ್ನು ತಟ್ಟುತ್ತಿವೆ.

ವಾಸುಕಿ ವೈಭವ್ ಸಂಗೀತ ಮನಸ್ಸಿಗೆ ನಾಟುತ್ತಿದೆ. ನಿರ್ಮಾಪಕ ಉಮಾಪತಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.