ಶಿವರಾಜ್‍ಕುಮಾರ್, ಸುದೀಪ್, ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ಕಾಂಬಿನೇಷನ್ ಸಿನಿಮಾ ದಿ ವಿಲನ್. ಶೂಟಿಂಗ್ ಮುಗಿಸಿ ಸೆನ್ಸಾರ್ ಮೆಟ್ಟಿಲೇರಿದೆ.
ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಕೆಜಿಎಫ್ ಚಿತ್ರ ಕೂಡಾ ಶೂಟಿಂಗ್ ಮುಗಿಸಿ, ಎಡಿಟಿಂಗ್ ಫೈನಲ್ ಸ್ಟೇಜ್‍ನಲ್ಲಿದೆ.
ಎರಡೂ ಕನ್ನಡದ ಬಹುನಿರೀಕ್ಷಿತ ಚಿತ್ರಗಳು. ಈ ಎರಡೂ ಚಿತ್ರಗಳು ಸೆಪ್ಟೆಂಬರ್‍ನಲ್ಲಿಯೇ ಮುಖಾಮುಖಿಯಾಗುವ ಸಾಧ್ಯತೆ ಇದೆ. ವಿಲನ್ ಚಿತ್ರದ ಆಡಿಯೋ ರಿಲೀಸ್‍ಗೆ ಭರ್ಜರಿ ವೇದಿಕೆ ಸಿದ್ಧವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲೇ ತೆರೆಗೆ ಬಂದರೆ ಅಚ್ಚರಿಯಿಲ್ಲ. ಕೆಜಿಎಫ್ ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಒಟ್ಟಿನಲ್ಲಿ ಸೆಪ್ಟೆಂಬರ್ ನಂತರ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳದ್ದೇ ಹಬ್ಬ.