` ರಾಘವೇಂದ್ರ ರಾಜ್‍ಕುಮಾರ್‍ಗೆ ಅಮ್ಮ ಸಿಕ್ರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
b jayashree to play raghavendra rajkumar;s mother
B Jayashree, Raghavendra Rajkumar Image

ರಾಘವೇಂದ್ರ ರಾಜ್‍ಕುಮಾರ್, ಅಮ್ಮನ ಮನೆ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. 14 ವರ್ಷಗಳ ನಂತರ ಬಣ್ಣ ಹಚ್ಚುತ್ತಿರುವ ರಾಘವೇಂದ್ರ ರಾಜ್‍ಕುಮಾರ್ ಅವರ ಫಸ್ಟ್‍ಲುಕ್ ಕೂಡಾ ಹೊರಬಿದ್ದಿತ್ತು. ಈಗ ಅವರಿಗೆ ಅಮ್ಮ ಸಿಕ್ಕಿದ್ದಾರೆ.

ರಾಘವೇಂದ್ರ ರಾಜ್‍ಕುಮಾರ್ ಅವರ ತಾಯಿಯಾಗಿ ನಟಿಸುತ್ತಿರುವುದು ಬಿ.ಜಯಶ್ರೀ. ರಂಗಭೂಮಿ ಕಲಾವಿದೆ, ನಟಿ, ಗಾಯಕಿ, ಮಾಜಿ ರಾಜ್ಯಸಭಾ ಸದಸ್ಯೆಯೂ ಆಗಿರುವ ಜಯಶ್ರೀ ಅಮ್ಮನ ಮನೆಯಲ್ಲಿ ರಾಘಣ್ಣಂಗೆ ಅಮ್ಮ. ರಾಘವೇಂದ್ರ ಅವರಿಗೆ ಪತ್ನಿಯಾಗಿ ನಟಿಸುತ್ತಿರುವುದು ಮಾನಸಿ ಸುಧೀರ್.

ನಿಖಿಲ್ ಮಂಜು ನಿರ್ದೇಶನದ ಅಮ್ಮನ ಮನೆ ಚಿತ್ರಕ್ಕೆ ಆರ್.ಎನ್.ಕುಮಾರ್ ನಿರ್ಮಾಪಕರು. ಆಗಸ್ಟ್ 15ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

Geetha Movie Gallery

Damayanthi Teaser Launch Gallery