ಮಂಡ್ಯದ ಜನ ಯಾರಿಗೆ ಇಷ್ಟವಾಗಲ್ಲ ಹೇಳಿ. ಗಾಂಧಿನಗರದವರಿಗಂತೂ ಮಂಡ್ಯ ಅಂದ್ರೆ ಮನೆ ಇದ್ದಂಗೆ. ಮಂಡ್ಯದ ಮೇಲೆ ಸಿನಿಮಾ ಮಂದಿಗೆ ವಿಶೇಷ ಪ್ರೀತಿ ಇದೆ. ಈಗ.. ಮಂಡ್ಯದ ಮೇಲೆ ಸಿಕ್ಕಾಪಟ್ಟೆ ಲವ್ವಾಗಿ ಹೋಗಿದೆ. ಅದಕ್ಕೆ ಕಾರಣವಾಗಿದ್ದು ಅಯೋಗ್ಯ ಸಿನಿಮಾ.
ಮಂಡ್ಯ ಭಾಷೆ, ಆ ಶೈಲಿ ನಂಗೆ ಹೊಸದು. ಹೀಗಾಗಿ ಹೇಗೆ ಮಾಡೋದು ಅನ್ನೋ ಟೆನ್ಷನ್‍ನಲ್ಲಿದ್ದೆ. ನಟ ಸತೀಶ್ ಮತ್ತು ನಿರ್ದೇಶಕ ಮಹೇಶ್, ಭಾಷೆಯನ್ನು ಹೇಳಿಕೊಟ್ರು. ಅವರಿಗೆ ಏನ್ ಬೇಕು ಅನ್ನೋದು ಪಕ್ಕಾ ಗೊತ್ತಿತ್ತು. ಹೀಗಾಗಿ ಈಸಿಯಾಗಿ ಹೋಯ್ತು. ಅಲ್ದೆ ಮಂಡ್ಯದ ಹುಡುಗೀರು ಹೇಗೆ ವರ್ತಿಸ್ತಾರೆ.. ಜಡೆ ಹೇಗ್ ಹಾಕ್ಕೊಳ್ತಾರೆ.. ಹುಡುಗರು ಚುಡಾಯಿಸಿದ್ರೆ ಯಾವ ರೀತಿ ರಿಯಾಕ್ಟ್ ಮಾಡ್ತಾರೆ ಅನ್ನೋದನ್ನೆಲ್ಲ ಮಂಡ್ಯದ ಹುಡುಗಿಯರಿಂದಲೇ ತಿಳಿದುಕೊಂಡೆ. ಶೂಟಿಂಗ್ ವೇಳೆ ಮಂಡ್ಯದ ಹುಡುಗಿಯೊಬ್ಬಳು ಗೆಳತಿಯಾಗಿ ಸಿಕ್ಕಳು. ಈಗ.. ನಂಗೆ ಮಂಡ್ಯದ ಮೇಲೆ ಲವ್ವಾಗಿ ಹೋಗಿದೆ ಅಂದೋರು ರಚಿತಾ ರಾಮ್. ಅವರು ಅಯೋಗ್ಯ ಚಿತ್ರದ ನಾಯಕಿ.
ಚಿತ್ರದಲ್ಲಿ ನಂದಿನಿ ಅನ್ನೋ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಚಿತಾ, ಅಪ್ಪನನ್ನು ಪ್ರೀತಿಸುವ ಮಗಳಾಗಿ ನಟಿಸಿದ್ದಾರೆ. ಹಳ್ಳಿ ಹುಡುಗಿ, ವಿದ್ಯಾವಂತೆ. ಲಂಗ ದಾವಣಿ, ಸೆಲ್ವಾರ್ ಕಮೀಜ್‍ನಲ್ಲಿ ಜನ ನನ್ನನ್ನು ಟ್ರೆಡಿಷನಲ್ ಲುಕ್‍ನಲ್ಲಿ ಇಷ್ಟಪಡ್ತಾರೆ ಅನ್ನೋ ಕಾನ್ಫಿಡೆನ್ಸ್ ರಚಿತಾಗಿದೆ. ಚಮಕ್ ಚಂದ್ರಶೇಖರ್ ನಿರ್ಮಾಣದ ಸಿನಿಮಾ ಇದೇ ವಾರ ರಿಲೀಸ್ ಆಗ್ತಿದೆ.