ಬಜಾರ್. ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಧನ್ವೀರ್ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ಸುನಿ. ಆದಿತಿ ಪ್ರಭುದೇವ ನಾಯಕಿ. ಈ ಚಿತ್ರದಲ್ಲೀಗ ಲವ್ ಫೇಲ್ಯೂರ್ ಆಗಿದೆ. ಅರ್ಥಾತ್.. ಮೊದಲ ಹಾಡು ರಿಲೀಸ್ ಆಗಿದೆ.
ಲವ್ ಫೇಲ್ಯೂರ್ ಆಗೋಯ್ತು ನನಗೆ.. ಫೀಲ್ ಅಂತೂ ಸೂಪರು ಕಣ್ಣೀರ ಜೊತೆಗೆ.. ಏನೇನೋ ಬೈದ್ರೂ ಚೆಂದಾನೇ ನನಗೆ.. ದೂರಾನೇ ಆದ್ರೂ ನೀ ಕಣ್ಣ ಒಳಗೆ.. ಅನ್ನೋ ಹಾಡು.. ಬಿಟ್ಟಿದ್ದಾರೆ ಸುನಿ. ಸಂಗೀತ ನೀಡಿರುವುದು ರವಿ ಬಸ್ರೂರು. ಹಾಡಿರುವುದು ವಿಜಯ್ ಪ್ರಕಾಶ್.
ಈ ಹಾಡಿನ ಸ್ಪೆಷಾಲಿಟಿ ಏನ್ ಗೊತ್ತಾ..? ಲವ್ ಫೇಲ್ಯೂರ್ ಅನ್ನು ಸೆಲಬ್ರೇಷನ್ ಮಾಡೋ ಹಾಡಿದು. ಭಗ್ನ ಪ್ರೇಮಿಗಳಿಗೆ ದುಃಖದ ಹಾಡಿದೆ. ಎಣ್ಣೆ ಹಾಡಿದೆ. ಫೀಲಿಂಗ್ ಸಾಂಗ್ ಇದೆ. ಆದರೆ, ಸೆಲಬ್ರೇಷನ್ ಸಾಂಗ್ ಇರಲಿಲ್ಲ. ಅಂಥಾದ್ದೊಂದು ಹಾಡು ಕೊಡೋ ಮೂಲಕ ಸುನಿ, ಒನ್ಸ್ ಎಗೇಯ್ನ್ ತಾವು ಡಿಫರೆಂಟ್ ಅಂತಾ ತೋರಿಸಿದ್ದಾರೆ.