ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಏನು ಕಾರಣ..? ಈ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗಲೆಲ್ಲ ಗಾಂಧಿನಗರದ ಗಲ್ಲಿಗಳಲ್ಲಿ ನಿಖಿಲ್‍ರತ್ತ ತೋರಿಸಲಾಗಿತ್ತು. ನಿಖಿಲ್ ಕುಮಾರಸ್ವಾಮಿಗೆ ಕುರುಕ್ಷೇತ್ರಕ್ಕಿಂತ ಮೊದಲು ತಮ್ಮ ನಾಯಕತ್ವದ ಸೀತಾರಾಮ ಕಲ್ಯಾಣ ಚಿತ್ರ ರಿಲೀಸ್ ಆಗಲಿ ಎಂಬ ಬಯಕೆಯಿದೆ. ಹೀಗಾಗಿ ಕುರುಕ್ಷೇತ್ರ ಡಬ್ಬಿಂಗ್ ಮಾಡದೆ ಸತಾಯಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಈ ಗಾಸಿಪ್ಪುಗಳಿಗೆ ಈಗ ಸ್ವತಃ ನಿಖಿಲ್ ಉತ್ತರ ಕೊಟ್ಟಿದ್ದಾರೆ.
ಕುರುಕ್ಷೇತ್ರ ವಿಳಂಬಕ್ಕೆ ನಾನು ಕಾರಣ ಅಲ್ಲ. ನಿರ್ದೇಶಕರು ಯಾವಾಗ ಕರೆದರೂ ಹೋಗಿ ಡಬ್ಬಿಂಗ್ ಮಾಡಿ ಬರೋಕೆ ರೆಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರಕ್ಕೆ ಯಾವ ಮತ್ತು ಎಷ್ಟು ಮಹತ್ವವಿದೆಯೋ.. ಚಿತ್ರದಲ್ಲಿಯೂ ಅಷ್ಟೇ ಮಹತ್ವ ಇದೆ. ಅಭಿಮನ್ಯು ಪಾತ್ರವನ್ನು ಲೆಂಗ್ತ್ ಮಾಡೋಕೆ ಅದು ಕಾಲ್ಪನಿಕ ಕಥೆಯಲ್ಲ. ಮಹಾಭಾರತದ ಕಥೆ ಎಂದಿದ್ದಾರೆ.