ರೋಡಿನಲ್ಲಿ, ಮನೆಯಲ್ಲಿ, ಆಫೀಸ್‍ನಲ್ಲಿ, ಟಾಯ್ಲೆಟ್‍ನಲ್ಲಿ, ಬೆಡ್‍ರೂಂನಲ್ಲಿ.. ಎಲ್ಲೆಲ್ಲಿಯೂ ಮೊಬೈಲ್ ಹಾವಳಿಯಿಟ್ಟುಬಿಟ್ಟಿದೆ. ಟೆಕ್ನಾಲಜಿ ಕ್ರಾಂತಿಯ ಮೊಬೈಲ್, ಚಟವಾಗಿದೆ. ಈ ಮೊಬೈಲ್ ಚಟದಾಸರಿಗೆ ಒಂದು ಎಚ್ಚರಿಕೆ ಹೇಳಲಿಕ್ಕೆಂದೇ ಬಂದಿರುವ ಚಿತ್ರ ಲೌಡ್‍ಸ್ಪೀಕರ್.
ಈ ಸಿನಿಮಾದಲ್ಲಿ ಒಂದು ಆಟವಿದೆ. ಏನಂದ್ರೆ, ಮೊಬೈಲ್‍ಗೆ ಎಲ್ಲ ಕರೆಗಳನ್ನು ಸ್ವೀಕರಿಸಿ, ಲೌಡ್‍ಸ್ಪೀಕರ್‍ನಲ್ಲೇ ಮಾತನಾಡಬೇಕು. ಮೊಬೈಲ್‍ಗೆ ಬಂದ ಎಲ್ಲ ಮೆಸೇಜ್‍ಗಳನ್ನೂ ಜೋರಾಗಿ ಓದಿ ಹೇಳಬೇಕು. ಆ ಒಂದು ಆಟ ಎಂಥ ಥ್ರಿಲ್ ಮತ್ತು ಅವಾಂತರ ಸೃಷ್ಟಿಸಬಹುದು ಎಂಬ ಕಾನ್ಸೆಪ್ಟ್ ಚಿತ್ರದ ಕಥೆ. ಹೀಗಾಗಿಯೇ ಇದು ಜಗತ್ತಿನ ಮೋಸ್ಟ್ ಡೇಂಜರಸ್ ಗೇಮ್ ಅನ್ನಿಸ್ಕೊಂಡಿರೋದು.
ಕನ್ನಡದಲ್ಲಿ ನನಗಿದು 4ನೇ ಸಿನಿಮಾ. ಗೃಹಿಣಿಯಾಗಿ ನಟಿಸಿದ್ದೇನೆ. ಈ ಹಿಂದೆ ಮಿಸ್ಟರ್ & ಮಿಸಸ್ ರಾಮಾಚಾರಿ, ಮುಕುಂದ ಮುರಾರಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದೆ. ತಮಿಳಿನಲ್ಲಿ ತಾರಾ ತಪ್ಪಟ್ಟೈ, ವೀರ ಶಿವಾಜಿ ಚಿತ್ರಗಳಲ್ಲಿ ನಟಿಸಿದ್ದೆ. ಲೌಡ್‍ಸ್ಪೀಕರ್ ನನ್ನ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಚಿತ್ರದ ನಾಯಕಿ ಕಾವ್ಯ ಶಾ. ಶಿವತೇಜಸ್ ನಿರ್ದೇಶನದ ಚಿತ್ರ, ಥಿಯೇಟರುಗಳಲ್ಲಿ ಲೌಡ್ ಆಗಿ ಸದ್ದು ಮಾಡುತ್ತಿದೆ.