ರಾಜ್ಯಾದ್ಯಂತ ಬಾಕ್ಸಾಫೀಸ್ ಮತ್ತು ಪ್ರೇಮಿಗಳ ಹೃದಯದಲ್ಲಿ ಹೊಸ ಕಥೆ ಬರೆಯುತ್ತಿರುವ ಕಥೆಯೊಂದು ಶುರುವಾಗಿದೆ ಚಿತ್ರ, ಈಗ ದುಬೈನಲ್ಲಿ ತೆರೆ ಕಾಣುತ್ತಿದೆ. ಇಂದಿನಿಂದ ದುಬೈನಲ್ಲಿ ಕಥೆಯೊಂದು ಶುರುವಾಗಿದೆ ಚಿತ್ರ ರಿಲೀಸ್.
ದುಬೈ, ಶಾರ್ಜಾ, ಅಲೈನ್ ಹಾಗೂ ಅಬುದಾಬಿಯಲ್ಲಿ ಚಿತ್ರ ಪ್ರದರ್ಶನ ಶುರುವಾಗುತ್ತಿದೆ. ದುಬೈನಲ್ಲೇ 10 ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ದಿಗಂತ್‍ರ ಕಮ್‍ಬ್ಯಾಕ್ ಸಿನಿಮಾ ಎನ್ನಲಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಸೆನ್ನಾ ಹೆಗ್ಡೆ ನಿರ್ದೇಶನದ ಮೊದಲ ಸಿನಿಮಾ ಕಥೆಯೊಂದು ಶುರುವಾಗಿದೆ.