ಪಾದರಸ.. ಸಂಚಾರಿ ವಿಜಯ್ ನಾಯಕರಾಗಿ ನಟಿಸಿರುವ ಸಿನಿಮಾ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸಂಚಾರಿ ವಿಜಯ್, ತುಂಟನಾಗಿ, ಪೋಲಿಯಾಗಿ ಕಾಣಿಸಿಕೊಂಡಿದ್ದಾರೆ. ಡಬ್ಬಲ್ ಮೀನಿಂಗ್ ಕೂಡಾ ಇಣುಕುತ್ತಿದೆ. ಜೊತೆಯಲ್ಲಿದ್ದುಕೊಂಡೇ ಯಾಮಾರಿಸುವ ವ್ಯಕ್ತಿಗಳಿಂದ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಅನ್ನೋದು ಚಿತ್ರದ ಸಂದೇಶ. ಚಿತ್ರದ ನಾಯಕಿ ವೈಷ್ಣವಿ.
ಚಿತ್ರದ ನಿರ್ಮಾಪಕ ಕೃಷ್ಣ ರೇವಣ್‍ಕರ್. ನಿರ್ದೇಶಕ ಹೃಷಿಕೇಶ್ ಜಂಬಗಿ ಅವರಿಗೂ ಇದು ಪ್ರಥಮ ಪ್ರಯತ್ನ. ಆದರೆ, ನಾಯಕಿ ವೈಷ್ಣವಿ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಅನ್ನೋದು ಚಿತ್ರತಂಡದ ಕಂಪ್ಲೇಂಟು.
ಚಿತ್ರತಂಡದ ಬಗ್ಗೆ ಬೇಸರವೇನೂ ಇಲ್ಲ. ಹಳೆಯ ಕಮಿಟ್‍ನಿಂದಾಗಿ ತಮಿಳು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಚಿತ್ರದ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ ವೈಷ್ಣವಿ. ನಾಯಕಿ ಇಲ್ಲದಿದ್ದರೂ ಚಿತ್ರತಂಡ ಚಿತ್ರವನ್ನು ಅತ್ಯುತ್ತಮವಾಗಿ ಪ್ರಚಾರ ಮಾಡುತ್ತಿದೆ. ಚಿತ್ರ ನಾಳೆ ತೆರೆಗೆ ಬರುತ್ತಿದೆ.