ಪಾದರಸ ಚಿತ್ರದಲ್ಲಿ ಹೀರೋ ಸಂಚಾರಿ ವಿಜಯ್. ನ್ಯಾಷನಲ್ ಅವಾರ್ಡ್ ಪಡೆದ ಮೇಲೆ ಅವರನ್ನು ಬಹುತೇಕ ಹುಡುಕೊಂಡು ಬಂದ ಚಿತ್ರಗಳೆಲ್ಲ ಸೀರಿಯಸ್ ಸಬ್ಜೆಕ್ಟ್ ಹೊಂದಿದ್ದಂತವೇ. ಹೀಗಾಗಿಯೇ ವಿಜಯ್‍ಗೆ ಪಾದರಸ ಡಿಫರೆಂಟ್ ಅನುಭವ ಕೊಟ್ಟಿದೆ. ಭಯಾನಕ ಅನುಭವವನ್ನೂ ಕೊಟ್ಟಿದೆ. ಹರೆಯದ ಹುಡುಗಾಟ ನೆನಪಿಸಿದೆ.
ಚಿತ್ರದ ಚಿತ್ರೀಕರಣದ ವೇಳೆ ವಿಜಯ್ ನದಿಗೆ ಬೀಳಬೇಕಿತ್ತಂತೆ. ಸೇತುವೆಯ ಮೇಲೆ ಚಿತ್ರೀಕರಣವಾಗುತ್ತಿದ್ದಾಗ, ಕೂದಲೆಳೆ ಅಂತರದಲ್ಲಿ ನದಿಯಿಂದ ಬೀಳೋದರಿಂದ ಬಚಾವ್ ಆದ ಘಟನೆಯನ್ನು ನೆನಪಿಸಿಕೊಳ್ತಾರೆ ವಿಜಯ್.
ಮಲಯಾಳಂ ಚಿತ್ರವೊಂದರ ಚಿತ್ರೀಕರಣದ ವೇಳೆಯಲ್ಲೂ ಕೇರಳದಲ್ಲಿ ಇಂಥದ್ದೇ ಅನುಭವವಾಗಿತ್ತು. ಅದೇಕೋ ಏನೋ.. ಕೇರಳಕ್ಕೂ ನನಗೂ ಆಗಿಬರಲ್ಲ ಎಂದು ನಗುತ್ತಾರೆ ವಿಜಯ್.
ಅಷ್ಟೇ ಅಲ್ಲ, ಚಿತ್ರದ ಪಾತ್ರ ಅವರಿಗೆ ಹರೆಯದಲ್ಲಿ ಮನೆಯಲ್ಲಿ ದುಡ್ಡು ಕದ್ದು ತಂದು, ಬೆಂಗಳೂರಿನಲ್ಲಿ ಮಜಾ ಉಡಾಯಿಸಿದ್ದ ದಿನಗಳನ್ನೂ ನೆನಪಿಸಿದೆಯಂತೆ.
ಇದೆಲ್ಲದರ ಜೊತೆಗೆ ಅವರು ಹೇಳೋ ಇನ್ನೊಂದು ಅನುಭವ ಮಸ್ತ್ ಆಗಿದೆ. ಚಿತ್ರದಲ್ಲಿ ಅವರು ಡಜನ್‍ಗಿಂತ ಹೆಚ್ಚು ಹುಡುಗಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ರಿಯಲ್ ಲೈಫಲ್ಲಿ ನಾನು ಅಷ್ಟು ಹುಡುಗಿಯರ ಜೊತೆ ಫ್ರೆಂಡ್‍ಶಿಪ್ ಕೂಡಾ ಇಲ್ಲ ಅಂತಾರೆ ವಿಜಯ್.
ವಿಜಯ್‍ಗೆ ಇಷ್ಟೆಲ್ಲ ಅನುಭವ ಕೊಟ್ಟಿರೋ ಪಾದರಸ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಹೃಷಿಕೇಶ್ ಜಂಬಗಿಗೂ ಇದು ಮೊದಲ ಸಿನಿಮಾ.