ಕೆಜಿಎಫ್ ಚಿತ್ರಕ್ಕೆ ಐಟಂ ಸಾಂಗ್‍ಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ. ಶೂಟಿಂಗ್ ನಡೆಯುತ್ತಿದೆ. ಅದೂ.. ಕನ್ನಡದ ಸೂಪರ್ ಹಿಟ್ ಸಾಂಗ್ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್. ಬಳ್ಳಿಯ ಮಿಂಚಿನಂತೆಯೇ ಬಳುಕುವ ತಮನ್ನಾ, ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ರಾಕಿಂಗ್ ಸ್ಟಾರ್ ಯಶ್ ಜೊತೆ.
ತಮನ್ನಾ ನೃತ್ಯದ ಹೆಜ್ಜೆಗಳಿಗೆ ಕೆಜಿಎಫ್ ತಂಡ ಥ್ರಿಲ್ಲಾಗಿ ಹೋಗಿದೆ. ಯಶ್ ಕೂಡಾ ಒಳ್ಳೆಯ ಡ್ಯಾನ್ಸರ್. ಇಬ್ಬರೂ ಅದ್ಭುತವಾಗಿ ಸ್ಟೆಪ್ ಹಾಕುತ್ತಿದ್ದು, ಹಾಡು ಅದ್ಭುತವಾಗಿ ಮೂಡಿ ಬರುತ್ತಿದೆಯಂತೆ.
ಹೊಂಬಾಳೆ ಫಿಲಂಸ್‍ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ, ಹೆಚ್ಚೂ ಕಡಿಮೆ 2 ವರ್ಷಗಳಿಂದ ಶೂಟಿಂಗ್‍ನಲ್ಲಿದೆ. ಮಿನರ್ವ ಹಾಲ್‍ನಲ್ಲಿ ಹಳೇ ಕಾಲದ ಪಬ್ ಸೆಟ್ ಹಾಕಲಾಗಿದ್ದು, ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.
ಜೋಕೆ ಸಾಂಗ್ ಚಿತ್ರೀಕರಣದಲ್ಲಿ ಯಶ್ ಜೊತೆ ಭಾಗಿಯಾಗಿದ್ದೇನೆ. ಚಿತ್ರತಂಡದ ಜೊತೆ ಮನೆಯವರ ಜೊತೆ ಇರುವಷ್ಟೇ ಖುಷಿಯಾಗಿದ್ದೇನೆ. ಕೆಲವೇ ದಿನಗಳಲ್ಲಿ ಕೆಜಿಎಫ್ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನೋಡಿ ಎಂದು ಟ್ವೀಟ್ ಮಾಡಿದ್ದಾರೆ ತಮನ್ನಾ.