ಒಂದ್ಸಲ ಲೌಡ್ ಸ್ಪೀಕರ್ ಆನ್ ಮಾಡಿ. ಹಾಗೆಯೇ ಮಾತಾಡ್ತಾ ಹೋಗಿ.. ಏನೇನೆಲ್ಲ ಆಗುತ್ತೆ ಅನ್ನೊದನ್ನ ಕಲ್ಪನೆ ಮಾಡಿಕೊಳ್ಳಿ... ಇದು ಚಿತ್ರದ ಒನ್‍ಲೈನ್ ಸ್ಟೋರಿ. ಉಳಿದಂತೆ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಬ್ಯಾಕ್‍ಗ್ರೌಂಡ್‍ನಲ್ಲಿ ಬರುತ್ತಿರುವ ಸಿನಿಮಾ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಯನ್ನು ಸುಂದರವಾಗಿ ತೆರೆಗೆ ತಂದಿರೋದು ಶಿವ ತೇಜಸ್.
ಚಿತ್ರದ ನಾಯಕಿ ನಟಿ ಡಾ.ದಿಶಾ ದಿನಕರ್. ವಿಶೇಷ ಅಂದ್ರೆ, ಅವರು ವೃತ್ತಿಯಲ್ಲಿಯೂ ಡಾಕ್ಟರ್. ಚಿತ್ರದಲ್ಲಿಯೂ ಡಾಕ್ಟರ್. ಹಿಗಾಗಿ ಪಾತ್ರ ಮಾಡೋದು ಕಷ್ಟವಾಗಲಿಲ್ಲ ಅಂತಾರೆ ಡಾ. ದಿಶಾ.
ಮೂವರು ಹೀರೋಗಳು, ಮೂವರು ಹೀರೋಯಿನ್ ಇರುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರೋದು ಸುಮಂತ್ ಭಟ್. ದತ್ತಣ್ಣ ಮತ್ತು ರಂಗಾಯಣ ರಘುರಂತಹ ಹಿರಿಯರೂ ಚಿತ್ರದಲ್ಲಿದ್ದಾರೆ.
ಪ್ರತಿಯೊಬ್ಬರ ಫೋನ್ ಪ್ರತಿಯೊಬ್ಬರ ಪರ್ಸನಲ್ ಖಜಾನೆ. ಆ ಖಜಾನೆ ಓಪನ್ ಆದರೆ, ನಮ್ಮ ರಹಸ್ಯಗಳು ಹೊರ ಜಗತ್ತಿಗೆ ಗೊತ್ತಾಗಿಬಿಟ್ಟರೆ.. ವಾಟ್ ನೆಕ್ಸ್ಟ್ ಅನ್ನೊದೇ ಚಿತ್ರದ ಕಥೆಯ ಥೀಮ್.