ಚಿತ್ರನಟಿ ರಾಧಿಕಾ ಕುಮಾರಸ್ವಾಮಿ, ದಮಯಂತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ಅವರನ್ನ ದಮಯಂತಿ ಮಾಡೋಕೆ ಹೊರಟಿರುವುದು ನಿರ್ದೇಶಕ ನವರಸನ್. ಈ ಹಿಂದೆ ರಾಕ್ಷಸಿ, ವೈರ ಚಿತ್ರಗಳನ್ನು ನಿರ್ದೇಶಿಸಿದ್ದವರು. ಇದು ತೆಲುಗಿನಲ್ಲಿ ಬಂದಿದ್ದ ಅರುಂಧತಿ, ಭಾಗ್‍ಮತಿ ಮಾದರಿಯ ಚಿತ್ರ. ಮೊದಲು ಕನ್ನಡದಲ್ಲಿ ಮಾಡಿ, ನಂತರ ತೆಲುಗು, ತಮಿಳಿನಲ್ಲಿಯೂ ಮಾಡುವ ಆಲೋಚನೆ ಇದೆ ಎಂದಿದ್ದಾರೆ ನವರಸನ್.
ಚಿತ್ರದಲ್ಲಿ ರಾಧಿಕಾ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ನವರಸನ್, ಈ ಬಾರಿ ನಟನೆಗೆ ಮಂದಾಗಿಲ್ಲ. ಚಿತ್ರದ ಕಥೆ ಕೇಳಿ ರಾಧಿಕಾ ತಕ್ಷಣ ಒಪ್ಪಿಕೊಂಡಿದ್ದಾರಂತೆ. ಈಗಾಗಲೇ ಭೈರಾದೇವಿ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ, ಅರ್ಜುನ್ ಸರ್ಜಾ ಜೊತೆ ಕಾಂಟ್ರ್ಯಾಕ್ಟ್ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ, ಈಗ ದಮಯಂತಿಯಾಗುತ್ತಿದ್ದಾರೆ.