ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರಹಸ್ಯ ಇದ್ದೇ ಇರುತ್ತೆ. ಆ ರಹಸ್ಯ ಹೊರಜಗತ್ತಿಗೆ ಗೊತ್ತಾದಾಗ ಶಾಕ್ ಆಗೋದು ಗ್ಯಾರಂಟಿ. ಅಂತಹ ರಹಸ್ಯ ಮತ್ತು ಆಟವನ್ನಿಟ್ಟುಕೊಂಡು ಬರುತ್ತಿರುವ ವಿಶಿಷ್ಟ ಸಿನಿಮಾ ಲೌಡ್‍ಸ್ಪೀಕರ್. ಇದು ಸಸ್ಪೆನ್ಸ್ ಅಂದ್ಕೊಂಡ್ರೆ ಸಸ್ಪೆನ್ಸ್. ಕಾಮಿಡಿ ಅಂದ್ಕೊಂಡ್ರೆ ಕಾಮಿಡಿ. ಥ್ರಿಲ್ಲರ್ ಅಂದ್ಕೊಂಡ್ರೆ ಥ್ರಿಲ್ಲರ್. ಎಲ್ಲವನ್ನೂ ಹದವಾಗಿ ಬೆರೆಸಿಯೇ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಿವ ತೇಜಸ್.
ಮಳೆ ಹಾಗೂ ಧೈರ್ಯಂ ಸಿನಿಮಾ ಮಾಡಿದ್ದ ಶಿವತೇಜಸ್, 3ನೇ ಚಿತ್ರದಲ್ಲೂ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಡಾ.ಕೆ.ರಾಜು ನಿರ್ಮಾಣದ ಸಿನಿಮಾ, ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಸುಮಂತ್ ಭಟ್, ಕಾರ್ತಿಕ್ ರಾವ್, ನೀನಾಸಂ ಭಾಸ್ಕರ್, ಕಾವ್ಯಾ ಶಾ, ಅನುಷಾ, ದಿಶಾ.. ಇವರೆಲ್ಲರ ಜೊತೆಗೆ ಸೀನಿಯರ್‍ಗಳಾದ ರಂಗಾಯಣ ರಘು ಮತ್ತು ದತ್ತಣ್ಣ. ಲೌಡ್‍ಸ್ಪೀಕರ್.. ಕರ್ನಾಟಕದಲ್ಲಷ್ಟೇ ಅಲ್ಲ, ಆಂಧ್ರ, ತಮಿಳುನಾಡಿನಲ್ಲೂ ಏಕಕಾಲಕ್ಕೆ ತೆರೆ ಕಾಣುತ್ತಿದೆ.