ದಿಗಂತ್ ಅಂದ್ರೆ ದೂದ್‍ಪೇಡ. ದಿಗಂತ್ ಅಂದ್ರೆ ಚಾಕೊಲೇಟ್ ಬಾಯ್. ದಿಗಂತ್ ಅಂದ್ರೆ ಹರೆಯದ ಹುಡುಗಿಯರ ಹೃದಯ ಸಾಮ್ರಾಟ. ಪೋಲಿತನ, ದಿಗಂತ್ ಅವರ ಆಭರಣ. ಅಂಥಾದ್ದರಲ್ಲಿ ಈ ದಿಗಂತ್, ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ನಟಿಸೋಕೆ ಯೆಸ್ ಎಂದಿದ್ದಾರೆ.
ಬಾಲಿವುಡ್‍ನಲ್ಲಿ ಕುನಾಲ್ ಕೊಹ್ಲಿ ರಾಮಾಯಣವನ್ನಿಟ್ಟುಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಫನಾ, ಹಮ್‍ತುಮ್.. ಸಿನಿಮಾ ನಿರ್ದೇಶಿಸಿದ್ದ ಕುನಾಲ್ ಕೊಹ್ಲಿ, ಈ ಬಾರಿ ಪೌರಾಣಿಕ ಚಿತ್ರವನ್ನೆತ್ತಿಕೊಂಡಿದ್ದಾರೆ. ಅವರಿಗೆ ದಿಗಂತ್, ಶ್ರೀರಾಮಚಂದ್ರನ ಪಾತ್ರಕ್ಕೆ ಓಕೆ ಎನ್ನಿಸಿದೆ.
ಕಥೆಯೊಂದು ಶುರುವಾಗಿದೆ ಯಶಸ್ಸಿನ ಸಂಭ್ರಮದಲ್ಲಿರುವ ದಿಗಂತ್, ಕೆಲವೇ ದಿನಗಳಲ್ಲಿ ನಿರ್ದೇಶಕರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಲಿದ್ದಾರೆ. ಆ ಸಿನಿಮಾ 2 ಭಾಗಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ ದಿಗಂತ್.