ಸಿನಿಮಾವೊಂದು 50 ದಿನ ಓಡುವುದೇ ಅಪರೂಪವಾಗಿರುವಾಗ.. ಶತದಿನೋತ್ಸವ ಆಚರಿಸಿಬಿಟ್ಟರೆ ಹಬ್ಬವೇ ಸರಿ. ಈ ಹಬ್ಬದ ಸಂಭ್ರಮವನ್ನೂ ಹೆಚ್ಚಿಸುವಂತೆ ಟಗರು ಚಿತ್ರ 25 ವಾರಗಳ ಪ್ರದರ್ಶನ ಕಂಡಿದೆ. ಟಗರು ಸಿಂಗಲ್ ಸ್ಕ್ರೀನ್‍ಗಳಲ್ಲಿ 25 ವಾರಗಳ ಪ್ರದರ್ಶನ ಕಂಡಿರುವುದು ವಿಶೇಷ.
ಚಿತ್ರದ ಈ ಯಶಸ್ಸಿನ ಕ್ರೆಡಿಟ್ ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ಸೂರಿಗೆ ಸಲ್ಲಬೇಕು. ಇಡೀ ಚಿತ್ರತಂಡದ ಒಟ್ಟಾರೆ ಶ್ರಮಕ್ಕೆ ಸಿಕ್ಕಿರುವ ಪ್ರತಿಫಲ ಅದು. ಸಿನಿಮಾದಿಂದ ಸಿನಿಮಾಗೆ ಜನ ನನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಅಂತಾರೆ ಶಿವರಾಜ್‍ಕುಮಾರ್.
ಕನ್ನಡದ ಪ್ರತಿಯೊಂದು ಚಿತ್ರಕ್ಕೂ 25 ವಾರ ಓಡುವ ಶಕ್ತಿಯಿದೆ. ಒಳ್ಳೆಯ ಸಿನಿಮಾ ಕೊಡಬೇಕಷ್ಟೆ. ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕ ಸೋಲಿಸಿಲ್ಲ ಎನ್ನುತ್ತಾರೆ ಶಿವಣ್ಣ.