ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಖ್ಯಾತಿಯ ಗುರುನಂದನ್, ಈಗ ಜೇಮ್ಸ್ ಬಾಂಡ್ ಆಗುತ್ತಿದ್ದಾರೆ. ಭಾಗ್ಯರಾಜ್, ಕಳ್ಬೆಟ್ಟದ ದರೋಡೆಕೋರರು ಚಿತ್ರ ನಿರ್ದೇಶಿಸಿದ್ದ ದೀಪಕ್ ಮಧುವನಹಳ್ಳಿ ನಿರ್ದೇಶನದ ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಗುರುನಂದನ್ ಹೀರೋ.
ಪಂಜಾಬ್‍ನಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ಇದು. ಬ್ಯಾಂಕ್ ರಾಬರಿ ಕಥೆಯಂತೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವನ್ನು ಕನ್ನಡೀಕರಿಸಿ ಸಿನಿಮಾ ಮಾಡಲಾಗುತ್ತಿದೆ. ಲಂಡನ್‍ನಲ್ಲಿಯೂ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಇದೆಯಂತೆ. ಆಗಸ್ಟ್ 17ಕ್ಕೆ ಸಿನಿಮಾ ಸೆಟ್ಟೇರುತ್ತಿದೆ.