ಕೆಜಿಎಫ್ ಚಿತ್ರಕ್ಕೆ ಕಾಜಲ್ ಅಗರ್‍ವಾಲ್ ಬರ್ತಾರಾ..? ಸ್ಪೆಷಲ್ ಸಾಂಗ್‍ನಲ್ಲಿ ಕುಣಿದು ಕುಪ್ಪಳಿಸ್ತಾರಾ..? ಅಂಥಾದ್ದೊಂದು ಚರ್ಚೆ ಗಾಂಧಿನಗರದಲ್ಲಿ ಜೋರಾಗಿ ನಡೆಯುತ್ತಿದೆ. ಕೆಜಿಎಫ್ ಟೀಂ ಹೂಂ ಅಂತಿಲ್ಲ, ಊಹೂಂ ಅಂತಿಲ್ಲ. ಆಗಸ್ಟ್ 7ವರೆಗೆ ವೇಯ್ಟ್ ಮಾಡಿ ಅಂತಿದೆ. ಆ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಆ ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾದಂತೆ.
ತಮನ್ನಾ ಭಾಟಿಯಾ, ಲಕ್ಷ್ಮೀ ರೈ ಹಾಗೂ ನೋರಾ ಫತೇಹಿ ಅವರನ್ನೂ ಕೂಡಾ ಸಂಪರ್ಕಿಸಿದೆಯಂತೆ. ಆದರೆ, ಯಶ್ ಜೊತೆ ಹೆಜ್ಜೆ ಹಾಕೋ ಆ ಚೆಲುವೆ ಯಾರು ಅನ್ನೋ ಸಸ್ಪೆನ್ಸ್‍ನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ.
ಹೊಂಬಾಳೆ ಫಿಲಂಸ್‍ನ ಅದ್ದೂರಿ ಸಿನಿಮಾ, ಕನ್ನಡ ಚಿತ್ರರಂಗದಲ್ಲೇ ದುಬಾರಿ ವೆಚ್ಚದ ಚಿತ್ರವಾಗುತ್ತಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ, 5 ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ.