ವಾಸು ನಾನ್ ಪಕ್ಕಾ ಕಮರ್ಷಿಯಲ್. ಈ ಚಿತ್ರದ ನಾಯಕನಷ್ಟೇ ನಾಯಕಿಯ ಕಥೆಯೂ ಇಂಟರೆಸ್ಟಿಂಗ್. ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು. ಅಮ್ಮ ಐ ಲವ್ ಯು ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಮುಖ. ಚೆಲುವೆ. ಈ ಚೆಲುವೆ ಮೊದಲು ನಟಿಸಿದ್ದ ಸಿನಿಮಾ ವಾಸು ನಾನ್ ಪಕ್ಕಾ ಕಮರ್ಷಿಯಲ್. ರಿಲೀಸ್ ಆಗಿದ್ದು ಮಾತ್ರ ಅಮ್ಮ ಐ ಲವ್ ಯು.
ಈ ಚಿತ್ರದಲ್ಲಿ ನಿಶ್ವಿಕಾ ಪಾತ್ರದ ಹೆಸರು ಮಹಾಲಕ್ಷ್ಮಿ. ಸಂಪ್ರದಾಯಸ್ಥ ಹುಡುಗಿ. ಆದರೆ, ಬಜಾರಿ. ಇಷ್ಟಪಟ್ಟಿದ್ದನ್ನು ಅದೆಷ್ಟೇ ಕಷ್ಟವಾದರೂ ದಕ್ಕಿಸಿಕೊಳ್ಳಲೇಬೇಕು ಎಂದು ಹೊರಡುವ ಹಠಮಾರಿ.
ಜಾಹೀರಾತಿನ ಮೂಲಕ ಚಿತ್ರರಂಗಕ್ಕೆ ಬಂದವಳು ನಾನು. ವಾಸು.. ಚಿತ್ರಕ್ಕೆ ಅಡಿಷನ್ ಮೂಲಕವೇ ಆಯ್ಕೆಯಾದೆ. ಅಮ್ಮ ಐ ಲವ್ ಯೂ ಚಿತ್ರಕ್ಕೂ ಅಷ್ಟೆ, ಅಡಿಷನ್ ಮೂಲಕವೇ ಆಯ್ಕೆಯಾದೆ. ಕನ್ನಡತಿಯಾಗಿ, ಕನ್ನಡ ನನ್ನ ಮೊದಲ ಆದ್ಯತೆ. ಅವಕಾಶ ಸಿಕ್ಕರೆ ಬೇರೆ ಭಾಷೆಗಳಲ್ಲೂ ನಟಿಸುತ್ತೇನೆ ಅಂತಾರೆ ನಿಶ್ವಿಕಾ ನಾಯ್ಡು.
ಅಮ್ಮ ಐ ಲವ್ ಯು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಈಗ.. ವಾಸು.. ಬೆಳ್ಳಿತೆರೆಗೆ ಬರುತ್ತಿದೆ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ಜೊತೆ ಪಡ್ಡೆಹುಲಿ ಚಿತ್ರಕ್ಕೂ ನಿಶ್ವಿಕಾ ನಾಯಕಿ.
ವಾಸು.. ಚಿತ್ರಕ್ಕೆ ಅನೀಶ್ ತೇಜೇಶ್ವರ್ ನಾಯಕರಾಗಿದ್ದಾರೆ. ರಗಡ್ ಲುಕ್‍ನಲ್ಲಿ ಪ್ರೇಮಿಯಾಗಿ, ಮಗನಾಗಿ ನಟಿಸಿದ್ದಾರೆ. ನಿರ್ಮಾಪಕರೂ ಅವರೇ. ಅಜಿತ ವಾಸನ್ ಉಗ್ಗಿ ನಿರ್ದೇಶನವಿದೆ.