ಕಾಮಿಡಿ ಕಿಂಗ್ ಶರಣ್, ಅಮೆರಿಕದಿಂದ ವಾಪಸ್ ಆಗಿದ್ದಾರೆ. ರಾಗಿಣಿ ದ್ವಿವೇದಿ ನಾಯಕಿಯಾಗಿರುವ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಚಿತ್ರೀಕರಣ ಅಮೆರಿಕದಲ್ಲಿಯೇ ನಡೆಯುತ್ತಿತ್ತು. ಒಂದು ತಿಂಗಳ ಶೂಟಿಂಗ್ ಮುಗಿಸಿರುವ ಶರಣ್, ಈಗ ರಷ್ಯಾಕ್ಕೆ ಹೋಗಿದ್ದಾರೆ. ರಜಾ ಸಮಯ, ವಿಶ್ರಾಂತಿ ಎಂದುಕೊಳ್ಳಬೇಡಿ. ಅಲ್ಲಿ ಇನ್ನೊಂದು ಸಿನಿಮಾ ಇದೆ.
ಸಂತು ನಿರ್ದೇಶನದ ವಿಕ್ಟರಿ 2 ಸಿನಿಮಾದ ಚಿತ್ರೀಕರಣ ರಷ್ಯಾದಲ್ಲಿ ಫಿಕ್ಸ್ ಆಗಿದೆ. ಆ ಚಿತ್ರದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ರ್ಯಾಂಬೋ 2 ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶರಣ್, ಅಧ್ಯಕ್ಷ ಇನ್ ಅಮೆರಿಕ ಹಾಗೂ ವಿಕ್ಟರಿ 2 ಚಿತ್ರಗಳಲ್ಲೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.