ಕುಮಾರಿ 21 F ಚಿತ್ರದ ಟ್ರೇಲರ್ ನೋಡಿದ್ದರೆ, ಇದು ಗೊತ್ತಿರುತ್ತೆ. ಚಿತ್ರದಲ್ಲಿ ಹೀರೋಯಿನ್ ಸ್ಮೋಕ್ ಮಾಡೋದು, ಡ್ರಿಂಕ್ಸ್ ಮಾಡೋದು ಮತ್ತು ಹೀರೋಗೆ ಕಿಸ್ ಮಾಡೋ ಸೀನ್‍ಗಳಿವೆ. ಚಿತ್ರದ ಆಫರ್ ಕೊಟ್ಟಾಗ, ಒಪ್ಪಿಕೊಳ್ಳುವ ಮುನ್ನವೇ ಶ್ರೀಮಾನ್ ವೇಮುಲ, ಚಿತ್ರದಲ್ಲಿ ನಿಮಗೆ ಕೆಲವು ಇಂಟಿಮೇಟ್ ಸೀನ್‍ಗಳಿವೆ. ರೊಮ್ಯಾಂಟಿಕ್ ದೃಶ್ಯಗಳಿವೆ ಎಂದು ಹೇಳಿಬಿಟ್ಟಿದ್ದರಂತೆ.
ನಿರ್ದೇಶಕರು ಹಾಗೆ ಹೇಳಿದ ಮೇಲೆ ಮನೆಗೆ ಬಂದು ವೊರಿಜಿನಲ್ ಸಿನಿಮಾ ನೋಡಿದೆ. ಅಂತಹ ದೃಶ್ಯಗಳಿದ್ದರೂ, ಪಾತ್ರ ತುಂಬಾ ಇಷ್ಟವಾಯ್ತು. ಹಾಗೆ ನೋಡಿದರೆ ಚಿತ್ರದ ಪಾತ್ರ ಕುಮಾರಿ ಕೂಡಾ, ಸ್ಮೋಕರ್, ಡ್ರಿಂಕರ್ ಅಲ್ಲ. ಹಾಗಾಗಿ ಒಪ್ಪಿಕೊಂಡೆ.
ನನಗೂ ಕೂಡಾ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಹೊಸ ಅನುಭವ. ಕಿಸ್ಸಿಂಗ್ ಕೂಡಾ. ಚಿತ್ರದಲ್ಲಿ ಹೊಸತನವಿದೆ. ಹುಡುಗಿಯ ಡ್ರೆಸ್, ಆಕೆಯ ವೃತ್ತಿ ನೋಡಿ, ಆಕೆಯ ಕ್ಯಾರೆಕ್ಟರ್ ಜಡ್ಜ್ ಮಾಡಬೇಡಿ. ಪ್ರೀತಿಸುವ ಹುಡುಗಿಯನ್ನು ನಂಬುವುದೂ ಕೂಡಾ ಪ್ರೀತಿಯ ಭಾಗ ಅನ್ನೋ ಸಂದೇಶ ಚಿತ್ರದಲ್ಲಿದೆ. ಈ ಚಿತ್ರ ಬಂದ ಮೇಲೆ ನನಗೆ ಇದೇ ಮಾದರಿಯ ಪಾತ್ರಗಳ ಆಫರ್ ಬಂದರೂ ಬರಬಹುದು. ಒಪ್ಪುತ್ತೇನೋ.. ಬಿಡುತ್ತೇನೋ.. ಕಥೆಯ ಮೇಲೆ ನಿಂತಿದೆ ಅಂತಾರೆ ನಿಧಿ.